ಗುಂಡ್ಲುಪೇಟೆ: ಪಟ್ಟಣವನ್ನು `ಮಾದರಿ ಪಟ್ಟಣ'ವಾಗಿ ಅಭಿವೃದ್ಧಿಪಡಿಸುವುದಾಗಿ ಸಚಿವ ಮಹದೇವಪ್ರಸಾದ್ ಭರವಸೆ ನೀಡಿದರು.
ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ಶನಿವಾರ ನಡೆದ ವಾಜಪೇಯಿ ನಗರ ನಿರ್ಗತಿಕ ಫಲಾನುಭವಿಗಳ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ರೂ 1.20 ಲಕ್ಷ ಹಾಗೂ ಪುರಸಭೆ ವತಿಯಿಂದ 30 ಸಾವಿರ ರೂಪಾಯಿ ನೀಡಲಾಗುತ್ತಿದೆ. ಅಲ್ಲದೆ, ಬ್ಯಾಂಕ್ ಮೂಲಕ 50 ಸಾವಿರ ರೂಪಾಯಿ ಸಾಲ ನೀಡಲಾಗುತ್ತಿದ್ದು, ಇದನ್ನು ಫಲಾನುಭವಿಗಳೇ ತೀರಿಸಬೇಕು ಎಂದು ಹೇಳಿದರು.
ಪಟ್ಟಣದ ಗೃಹಮಂಡಳಿ ನಿವೇಶನದ ಪಕ್ಕ 25 ಎಕರೆ ಪ್ರದೇಶ ಗುರುತಿಸಲಾಗಿದೆ. ಈ ಪೈಕಿ 15 ಎಕರೆಯನ್ನು ಸರ್ಕಾರಿ ನಿವೇಶನವನ್ನಾಗಿ ಮಾರ್ಪಾಡು ಮಾಡಲಾಗುವುದು ಎಂದರು.
ನಂಜನಗೂಡು ತಾಲ್ಲೂಕಿನ ದೇಬೂರು ವಿದ್ಯುತ್ ಮಾರ್ಗದಿಂದ ಪಟ್ಟಣಕ್ಕೆ 24 ತಾಸು ವಿದ್ಯುತ್ ನೀಡುವ ಯೋಜನೆಗೆ ರೂ 25 ಕೋಟಿ ಬಿಡುಗಡೆಯಾಗಿದೆ. ನಗರೋತ್ಥಾನ ಯೋಜನೆಯಡಿ ರೂ 5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರ ಪಟ್ಟಣದ ಒಳಚರಂಡಿ ಮತ್ತು ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಪುರಸಭಾ ಸದಸ್ಯರಾದ ರಮೇಶ್, ಜಿ.ಕೆ. ನಾಗೇಂದ್ರ, ವೆಂಕಟಾಚಲ, ಗೋವಿಂದ್‌ರಾಜನ್, ಯುವ ಕಾಂಗ್ರೆಸ್ ಅಧ್ಯಕ್ಷ ಜಿ.ಕೆ. ಲೋಕೇಶ್, ಪುತ್ತನಪುರ ರಾಜಶೇಖರ್, ಪುರಸಭಾ ಮಾಜಿ ಸದಸ್ಯ ಮೋಹನ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.