ADVERTISEMENT

ಸಾವಯವ ಕೃಷಿ ಪದ್ಧತಿ ಅನುಸರಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 9:20 IST
Last Updated 8 ಜೂನ್ 2011, 9:20 IST

ಗುಂಡ್ಲುಪೇಟೆ: ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುವುದರಿಂದ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಸುಚಿತ್ರಕುಮಾರಿ ಹೇಳಿದರು.

ತಾಲ್ಲೂಕಿನ ಮಳವಳ್ಳಿ ಗ್ರಾಮದಲ್ಲಿ ಭೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಸಾವಯವ ಕೃಷಿ ಬಳಗದಿಂದ ನಡೆದ ಸಾವಯವ ಕೃಷಿ ವಿಧಾನ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

`ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಸುವುದರಿಂದ ಮಾನವನ ದೇಹಕ್ಕೆ ವಿಷ ಪದಾರ್ಥಗಳು ಸೇರಿ ಮನುಷ್ಯನ ಆಯಸ್ಸನ್ನೇ ಕಡಿಮೆ ಮಾಡುತ್ತಿವೆ~ ಎಂದರು.

ರೈತರು ತಕ್ಷಣಕ್ಕೆ ದೊರೆಯುವ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಸುತ್ತಿದ್ದಾರೆ ಇದನ್ನು ಬಿಟ್ಟು ಹಸಿರೆಲೆ, ತಿಪ್ಪೆ, ಎರೆಹುಳು ಗೊಬ್ಬರಗಳನ್ನು ತಯಾರಿಸಿ ಬಳಸ ಬೇಕೆಂದು ಸಲಹೆ ನೀಡಿದರು. ಕ್ರಿಮಿನಾಶಕಗಳ ಬದಲಿಗೆ ಬೇವಿನ ಎಣ್ಣೆ, ಜೀವಾಮೃತಗಳನ್ನು ಸಿಂಪರಣೆ ಮಾಡ ಬೇಕು ಎಂದರು.

ಭೈಫ್ ಸಂಸ್ಥೆಯ ಯೋಜನಾಧಿಕಾರಿ ಚಂದ್ರಪ್ರಭ, ಗ್ರಾಮದ ಮುಖಂಡರುಗಳಾದ ಮಹಾದೇವಪ್ಪ, ಬಸಪ್ಪ, ರಾಜು, ಭೋಗಪ್ಪ ಮುಂತಾದವರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.