ADVERTISEMENT

‘ಯುವಜನರಿಗೆ ಏಡ್ಸ್ ಅರಿವು ಅಗತ್ಯ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 6:00 IST
Last Updated 20 ಡಿಸೆಂಬರ್ 2013, 6:00 IST

ಕೊಳ್ಳೇಗಾಲ: ಹದಿಹರೆಯದ ಯುವಕ ಯುವತಿಯರೇ ಹೆಚ್ಚಾಗಿ ಎಚ್‌ಐವಿ ರೋಗಕ್ಕೆ ಬಲಿಯಾಗುತ್ತಿದ್ದು, ಯುವ ಪೀಳಿಗೆ ಈ ರೋಗದ ಬಗ್ಗೆ ಅರಿವನ್ನು ಪಡೆಯಬೇಕಿದೆ ಎಂದು ಉದ್ಯಮಿ ಎ.ಡಿ. ಶಿವಪ್ರಕಾಶ್‌ ಹೇಳಿದರು.

ಅವರು ಪಟ್ಟಣದ ಎಂಜಿಎಸ್‌ವಿ ಸರ್ಕಾರಿ ಪಿಯು ಕಾಲೇಜಿನ ಆವರಣ­ದಲ್ಲಿ ಎನ್‌ಎಸ್‌ಎಸ್‌ ರೋಟ್ರಾಕ್ಟ್‌, ರೆಡ್‌ ರಿಬ್ಬನ್‌ ಕ್ಲಬ್‌, ರೋಟರಿ ಸಂಸ್ಥೆ, ರೋಟರಿ ಮಿಡ್‌– ಟೌನ್‌ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ  ಏರ್ಪಡಿಸಿದ್ದ ಎಚ್‌ಐವಿ/ಏಡ್ಸ್‌ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿರಂತರವಾಗಿ 10 ಸಾವಿರ ಸ್ಕಿಪಿಂಗ್‌ ಮಾಡುವ ಯುವಕನಿಗೆ 10 ಸಾವಿರ ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ ಅವರು, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ರೋಟರಿ ಸಂಸ್ಥೆ ಅಧ್ಯಕ್ಷ ಬಿ.ಕೆ. ಪ್ರಕಾಶ್‌, ರೋಟರಿ ಏಡ್ಸ್‌ ಸಮಿತಿ ಅಧ್ಯಕ್ಷ ಶಿವಣ್ಣ, ಪ್ರಾಂಶುಪಾಲ ಮಹಾದೇವ ಮಾತನಾಡಿದರು.
ಎಚ್‌ಐವಿ/ಏಡ್ಸ್‌ ಕುರಿತು ಉಪ ವಿಭಾಗ ಆಸ್ಪತ್ರೆಯ ಎಆರ್‌ಟಿ ಕೇಂದ್ರದ ಆಪ್ತ ಸಮಾಲೋಚಕ ಶ್ಯಾಮ್‌ಸುಂದರ್‌ ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ 220ಕ್ಕೂ ಹೆಚ್ಚು ವಿದ್ಯಾರ್ಥಿಗಳ ರಕ್ತಗುಂಪು ಪರೀಕ್ಷೆಯನ್ನು ನಡೆಸಲಾಯಿತು.

ಎಚ್‌ಐವಿ ಕುರಿತು ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು. ಚಿತ್ರಸ್ಪರ್ಧೆ– ಪೃಥ್ವಿರಾಜ್‌, ನವೀನ್‌ ವರ್ಮ, ಅಮೃತ್‌, ಚಚಾಸ್ಪರ್ಧೆ– ಕಿರಣ್‌, ದರ್ಶನ್‌, ಪೃಥ್ವಿರಾಜ್‌, ಪ್ರಬಂಧ ಸ್ಪರ್ಧೆ– ಪುಷ್ಪಕ್‌, ಚೇತನ್‌, ಶ್ರೀಧರ್‌ ಅವರು ಬಹುಮಾನ ಪಡೆದರು.

ರೋಟರಿ ಮಿಡ್‌–ಟೌನ್‌ ಅಧ್ಯಕ್ಷ ಬಸವಲಿಂಗಪ್ಪ, ಕಾರ್ಯದರ್ಶಿ ಉಮಾ­ಶಂಕರ್‌, ಎನ್‌ಎಸ್‌ಎಸ್‌ ಯೋಜನಾ ಅಧಿಕಾರಿ ನರಸಿಂಹಯ್ಯ, ಉಪನ್ಯಾಸಕ ಚಿಕ್ಕಣ್ಣಸ್ವಾಮಿ, ಮಹದೇವಪ್ರಸಾದ್‌, ಗುರುಪಾದಸ್ವಾಮಿ, ನಾಗೇಂದ್ರಸ್ವಾಮಿ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.