ADVERTISEMENT

ಬಯಲು ಶೌಚ ತಡೆಗಟ್ಟಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 8:38 IST
Last Updated 10 ಜನವರಿ 2018, 8:38 IST

‘ಕೊಳ್ಳೆಗಾಲದಿಂದ ತಿ.ನರಸೀಪುರಕ್ಕೆ ಹೋಗುವಾಗ ಮುಳ್ಳೂರು–ಕಲಿಯೂರು ಬಳಿ ಮುಖ್ಯರಸ್ತೆಯಲ್ಲೆ ತ್ಯಾಜ್ಯವನ್ನು ಎಸೆಯುವುದರಿಂದ ಹಾಗೂ ರಸ್ತೆ ಬದಿಯಲ್ಲೇ ಮಲವಿಸರ್ಜನೆ ಮಾಡುವುದರಿಂದ ಗಬ್ಬು ನಾರುತಿದ್ದು ಅಲ್ಲಿ ಸಂಚರಿಸುವುದು ಅಸಹನೀಯವಾಗಿದೆ.

ಅಲ್ಲದೇ, ರಸ್ತೆಬದಿಯಲ್ಲಿ ಗಿಡಗಂಟಿಗಳು ಬೆಳೆದಿರುವುದರಿಂದ ಹಾಗೂ ಕೊಳ್ಳೆಗಾಲದಿಂದ ಮುಳ್ಳೂರಿನ ಸರ್ಕಾರಿ ಪ್ರೌಢಶಾಲೆ ವರೆಗೂ ಸುಮಾರು 8 ಕಿ.ಮೀ ರಸ್ತೆ ಗುಂಡಿಗಳಿಂದ ಕೂಡಿದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಆದ್ದರಿಂದ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಿ ಶೀಘ್ರವೇ ಅದನ್ನು ಸರಿಪಡಿಸಬೇಕು
ರಾಜರತ್ನಂ ಪಿಳ್ಳೆ, ಮುಳ್ಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT