ADVERTISEMENT

ಯಳಂದೂರು: ಕೋಳಿ ಹೊತ್ತೊಯ್ದ ಚಿರತೆ ಮರಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 13:16 IST
Last Updated 1 ಜೂನ್ 2025, 13:16 IST
<div class="paragraphs"><p>ಚಿರತೆ ಮರಿ (ಸಂಗ್ರಹ ಚಿತ್ರ)</p></div>

ಚಿರತೆ ಮರಿ (ಸಂಗ್ರಹ ಚಿತ್ರ)

   

ಯಳಂದೂರು: ತಾಲ್ಲೂಕಿನ ಬನ್ನಿ ಸಾರಿಗೆ ಗ್ರಾಮದ ಜಮೀನಿನ ಕೋಳಿ ಮತ್ತು ಮೀನು ಸಾಕಣೆ ಸ್ಥಳಕ್ಕೆ ನುಗ್ಗಿದ ಚಿರತೆ ಮರಿ ಕೋಳಿಗಳನ್ನು ಶನಿವಾರ ಕೊಂದು ಹಾಕಿದೆ. ಕೋಳಿಯನ್ನು ಹೊತ್ತೊಯ್ದಿದೆ. 

ಈ ಭಾಗದಲ್ಲಿ ದೊಡ್ಡ ಚಾನೆಲ್ ಇದೆ. ಸಣ್ಣಪುಟ್ಟ ಗುಡ್ಡಗಳು ಸಮೀಪದಲ್ಲಿಯೇ ಇವೆ. ಹಾಗಾಗಿ ಚಿರತೆ ಮರಿಗಳು ಹಗಲು ಹೊತ್ತಿನಲ್ಲೇ ಓಡಾಡುತ್ತವೆ. ಕೋಳಿ ಇಲ್ಲವೇ ಕುರಿಯನ್ನುಅವು ಬೇಟೆಯಾಡುತ್ತವೆ ಎಂದು ಪ್ರತ್ಯಕ್ಷದರ್ಶಿ ಸಂಜಯ್ ಗೌಡ ಹೇಳಿದರು.

ADVERTISEMENT

ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಬೋನು ಇಡುವ ಭರವಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.