ಗುಂಡ್ಲುಪೇಟೆ: ತಾಲ್ಲೂಕಿನ ಪಡಗೂರು ಗ್ರಾಮದಲ್ಲಿ ಚಿರತೆಗಾಗಿ ಇಟ್ಟಿದ್ದ ಬೋನಿನಲ್ಲಿ ವ್ಯಕ್ತಿ ಸೆರೆಯಾದ ವಿಚಿತ್ರ ಘಟನೆ ನಡೆದಿದೆ.
ಗ್ರಾಮದ ಹನುಮಯ್ಯ ಎಂಬುವರು ಬೋನಿನಲ್ಲಿ ಸೆರೆಯಾಗಿದ್ದ ವ್ಯಕ್ತಿ.
ಈ ಭಾಗದಲ್ಲಿ ಜಾನುವಾರುಗಳ ಮೇಲೆ ಚಿರತೆಯೊಂದು ನಿರಂತರ ದಾಳಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಮಹಾದೇವಸ್ವಾಮಿ ಎಂಬುವರ ಜಮೀನಿನಲ್ಲಿ ‘ತುಮಕೂರು ಮಾದರಿ’ ಬೋನನ್ನು ಅಳವಡಿಸಿ ಕರು ಕಟ್ಟಿದ್ದರು.
ಕರು ನೋಡಲು ಬೋನಿನ ಒಳಕ್ಕೆ ಹನುಮಯ್ಯ ಹೋದಾಗ ಬಾಗಿಲು ಬಂದ್ ಆಗಿ ಸುಮಾರು 6 ತಾಸು ಅದರೊಳಗೆ ಉಳಿದಿದ್ದಾರೆ. ಸ್ಥಳೀಯ ರೈತರೊಬ್ಬರು ಬೋನಿಗೆ ವ್ಯಕ್ತಿ ಸೆರೆಯಾಗಿದನ್ನು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಬೋನಿನಲ್ಲಿದ್ದ ವ್ಯಕ್ತಿಯನ್ನು ಬಂಧಮುಕ್ತಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.