ADVERTISEMENT

ಯಳಂದೂರು: ನಾಯಿಯನ್ನು ನುಂಗಿದ ಹೆಬ್ಬಾವು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 7:15 IST
Last Updated 18 ಅಕ್ಟೋಬರ್ 2020, 7:15 IST
ಬೃಹತ್ ಗಾತ್ರದ ಹೆಬ್ಬಾವನ್ನು ಸಂತೇಮರಹಳ್ಳಿ ಸ್ನೇಕ್ ಮಹೇಶ್ ರಕ್ಷಿಸಿದರು
ಬೃಹತ್ ಗಾತ್ರದ ಹೆಬ್ಬಾವನ್ನು ಸಂತೇಮರಹಳ್ಳಿ ಸ್ನೇಕ್ ಮಹೇಶ್ ರಕ್ಷಿಸಿದರು   

ಯಳಂದೂರು: ತಾಲ್ಲೂಕಿನ ಮುರಟಿಪಾಳ್ಯ ಸಮೀಪದ ಫಾರಂ ಹೌಸ್‌ನ ಸಾಕು ನಾಯಿ ನುಂಗಿದ್ದ ಹೆಬ್ಬಾವನ್ನು ಸಂತೇಮರಹಳ್ಳಿ ಸ್ನೇಕ್ ಮಹೇಶ್ ಶನಿವಾರ ಸಂರಕ್ಷಿಸಿ ಬಿಳಿಗಿರಿರಂಗನಬೆಟ್ಟದ ಕಾಡಿಗೆ ಬಿಟ್ಟರು.

ಹರೀಶ್ ಒಡೆತನದ ಜಾಕ್ನಿಲ್ ಫ್ಯಾಕ್ಟರಿ ಬಳಿ ಹೆಬ್ಬಾವು ಕಾಣಿಸಿಕೊಂಡಿತ್ತು. ಇದರಿಂದ ಶ್ರಮಿಕರು ಮತ್ತು ಮಾಲೀಕರ ಓಡಾಟಕ್ಕೆ ತೊಂದರೆಯಾಗಿತ್ತು. ನೆಲವಾಸಿಯಾದ ಇದನ್ನು ಸುರಕ್ಷಿತವಾಗಿ ಇಡಿಯಲಾಯಿತು.

ಇಂಡಿಯನ್ ರಾಕ್ ಫೈತಾನ್ (ಫೈತಾನ್ ಮೊಲುರಸ್) ಹೆಸರಿನ ಹೆಬ್ಬಾವು ಈ ಭಾಗಗಳಲ್ಲಿ ವಿಶೇಷವಾಗಿ ಕಾಣಸಿಗುತ್ತವೆ. 4 ಮೀಟರ್ ತನಕ ಬೆಳೆಯುತ್ತದೆ. ವಿಷರಹಿತ ಉರಗ ವಾಗಿದ್ದು, ಜನರು ಆತಂಕ ಪಡಬೇಕಿಲ್ಲ ಎಂದು ಸ್ನೇಕ್ ಮಹೇಶ್ ಹೇಳಿದರು.

ADVERTISEMENT

ಕಾಡಿಗೆ ಬಿಡುವಾಗ ಅರಣ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.