ADVERTISEMENT

ಚಾಮರಾಜನಗರ: ಸಕ್ರಿಯ ಪ್ರಕರಣಗಳ ಸಂಖ್ಯೆ 1410ಕ್ಕೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 16:41 IST
Last Updated 12 ಜೂನ್ 2021, 16:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 142 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. 216 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 1,410ಕ್ಕೆ ಇಳಿದಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆಯೂ ಇಳಿಮುಖವಾಗಿದ್ದು, ಸದ್ಯ 52 ಮಂದಿ ಇದ್ದಾರೆ. ಹೋಂ ಐಸೊಲೇಷನ್‌ನಲ್ಲಿ 72 ಮಂದಿ ಇದ್ದಾರೆ. ಉಳಿದವರು ಕೋವಿಡ್‌ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 29,343 ಮಂದಿಗೆ ಕೋವಿಡ್‌ ದೃಢಪಟ್ಟಿದೆ. 27,454 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ಯೇತರ ಕಾರಣದಿಂದ ಮೃತಪಟ್ಟ ಸೋಂಕಿತರೂ ಸೇರಿದಂತೆ 504 ಮಂದಿ ಕೊನೆಯುಸಿರೆಳೆದಿದ್ದಾರೆ.

ADVERTISEMENT

ಶನಿವಾರ 1,599 ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, 1,469 ವರದಿಗಳು ನೆಗೆಟಿವ್‌ ಬಂದಿವೆ. 130 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಹಳೆಯ 12 ಪ್ರಕರಣಗಳು ಸೇರಿದಂತೆ 142 ಪ್ರಕರಣಗಳನ್ನು ಜಿಲ್ಲಾಡಳಿತ ವರದಿಯಲ್ಲಿ ಉಲ್ಲೇಖಿಸಿದೆ.

ಹೊಸ ಸೋಂಕಿತರ ಪೈಕಿ ಚಾಮರಾಜನಗರ ತಾಲ್ಲೂಕಿನ 59, ಗುಂಡ್ಲುಪೇಟೆಯ 44, ಕೊಳ್ಳೇಗಾಲದ 14, ಹನೂರಿನ 16, ಯಳಂದೂರು ತಾಲ್ಲೂಕಿನ ಎಂಟು ಹಾಗೂ ಹೊರ ಜಿಲ್ಲೆಯ ಒಬ್ಬರು ಇದ್ದಾರೆ.

ಶನಿವಾರ ಗುಣಮುಖರಾದ ಗುಣಮುಖರಾದ 216 ಜನರಲ್ಲಿ, ಆಸ್ಪತ್ರೆಯಲ್ಲಿ 23 ಮಂದಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್‌ ಕೇರ್‌ ಕೇಂದ್ರದಲ್ಲಿ 185 ಮಂದಿ ಇದ್ದರು. ಹೋಂ ಐಸೊಲೇಷನ್‌ನಲ್ಲಿ ಎಂಟು ಮಂದಿ ಇದ್ದರು.

ಚಾಮರಾಜನಗರ ತಾಲ್ಲೂಕಿನ 71, ಗುಂಡ್ಲುಪೇಟೆ 42, ಕೊಳ್ಳೇಗಾಲದ 31, ಹನೂರಿನ 50, ಯಳಂದೂರು ತಾಲ್ಲೂಕಿನ 21 ಮಂದಿ ಮತ್ತು ಹೊರ ಜಿಲ್ಲೆಯ ಒಬ್ಬರು ಕೋವಿಡ್‌ ಗೆದ್ದಿದ್ದಾರೆ.

ಪರಿಷ್ಕೃತ ವರದಿ: ಜಿಲ್ಲಾಡಳಿತವು ಶುಕ್ರವಾರ ತಡರಾತ್ರಿ ಪರಿಷ್ಕೃತ ವರದಿ ಕಳುಹಿಸಿದ್ದು, ಅದರಲ್ಲಿ, ಶುಕ್ರವಾರ ದೃಢಪಟ್ಟ ಹೊಸ ಪ್ರಕರಣಗಳ ಸಂಖ್ಯೆ 195 ಎಂದು ಉಲ್ಲೇಖಿಸಿದೆ. ಅದಕ್ಕೂ ಮೊದಲು ಕಳುಹಿಸಿದ್ದ ವರದಿಯಲ್ಲಿ 228 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.