ADVERTISEMENT

ಬೈಕ್ ಸವಾರನಿಗೆ ಒದೆಯಲು ಹೋದ ಎಎಸ್‍ಐ

​ಪ್ರಜಾವಾಣಿ ವಾರ್ತೆ
Published 24 ಮೇ 2021, 5:07 IST
Last Updated 24 ಮೇ 2021, 5:07 IST
ಬೈಕ್ ಸವಾರನಿಗೆ ನಿಂದಿಸಿ ಒದೆಯಲು ಹೋದ ಎಎಸ್‍ಐ ರಾಮಸ್ವಾಮಿ
ಬೈಕ್ ಸವಾರನಿಗೆ ನಿಂದಿಸಿ ಒದೆಯಲು ಹೋದ ಎಎಸ್‍ಐ ರಾಮಸ್ವಾಮಿ   

ಕೊಳ್ಳೇಗಾಲ: ಬೈಕ್ ಸವಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಡು ರಸ್ತೆಯಲ್ಲಿ ಕಾಲಿನಿಂದ ಒದೆಯಲು ಮುಂದಾದ ಎಎಸ್‍ಐ ರಾಮಸ್ವಾಮಿ, ಗೃಹ ರಕ್ಷಕ ದಳದ ಸಿಬ್ಬಂದಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿ ದಾಡಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ ಬೆಳಿಗ್ಗೆ ಬಾಪುನಗರದ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಔಷಧಿ ಚೀಟಿ ಹಿಡಿದು ಬಂದ ಯುವಕನನ್ನು ಎಳೆದಾಡಿರುವ ಎಎಸ್‍ಐ ರಾಮಸ್ವಾಮಿ ನಿಂದಿಸಿ, ಒದೆಯಲು ಮುಂದಾಗಿ ಬೈಕ್ ಕಸಿದು ಕೊಳ್ಳುವುದು ವಿಡಿಯೊದಲ್ಲಿ ಸೆರೆಯಾಗಿದೆ.

ADVERTISEMENT

ಇತ್ತೀಚೆಗೆ ಕೆಲವು ಪೊಲೀಸ್‌ ಸಿಬ್ಬಂದಿಯ ದರ್ಪ ಮಿತಿಮೀರುತ್ತಿದೆ ಅಂಥವರಿಗೆ ಧಿಕ್ಕಾರ ಎಂದು ತಾಲ್ಲೂಕಿನ ಹೊಸ ಹಂಪಾಪುರ ಗ್ರಾಮದ ಅಭಿಷೇಕ್‌ ಈ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ.

ಪೊಲೀಸ್ ದಾದಾಗಿರಿಗೆ ನಮ್ಮ ಧಿಕ್ಕಾರ, ಇವರಿಗೆ ಅವಾಚ್ಯ ಶಬ್ದಗಳಿಂದ ಮಾತನಾಡಲು, ಹಲ್ಲೆ ಮಾಡಲು ಅಧಿಕಾರ ಕೊಟ್ಟವರು ಯಾರು? ಇಂಥವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕಮೆಂಟ್‌ ಮಾಡಿದ್ದಾರೆ.

ಪೊಲೀಸರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಪ್ರತಿನಿತ್ಯ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವರು ನಿತ್ಯವೂ ವಾಹನ ತಪಾಸಣೆ ಮಾಡು ತ್ತಿದ್ದಾರೆ. ನಾವು ತುರ್ತು ಸಮಯದಲ್ಲಿ ಹೆಲ್ಮೆಟ್ ಹಾಕದೆ ಬೈಕ್ ಓಡಿಸುತ್ತೇವೆ. ಆದರೆ ಅವರು ಲಾಕ್ ಡೌನ್ ಸಮಯದಲ್ಲಿ ₹500, 1ಸಾವಿರ ದಂಡ ಹಾಕುತ್ತಾರೆ. ಹಣ ಇಲ್ಲದೆ ಪರದಾ ಡುತ್ತಿರುವಾಗ ಈ ರೀತಿ ಮಾಡುವುದು ಸರಿಯಲ್ಲ ಎಂದು ಹಲವರು ಒತ್ತಾಯಿಸಿದ್ದಾರೆ.

ಈಗಾಗಲೇ ಈ ವಿಚಾರದ ಬಗ್ಗೆ ಠಾಣೆಯಲ್ಲಿ ವಿಚಾರಣೆ ಮಾಡಿದ್ದು, ಕ್ರಮ ಕೈಗೊಂಡಿದ್ದೇವೆ ಪಿ.ಎಸ್.ಐ ತಾಜುದ್ದೀನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.