ADVERTISEMENT

ಬಂಡೀಪುರ: ಹುಲಿ ದಾಳಿಗೆ ಮರಿಯಾನೆ ಸಾವು

ಮೂರು ದಿನಗಳ ಹಿಂದೆ ದಾಳಿ, ಶನಿವಾರ ಹೆದ್ದಾರಿ ಬದಿ ಮರಿ ಸಾವು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 9:05 IST
Last Updated 20 ಏಪ್ರಿಲ್ 2024, 9:05 IST
<div class="paragraphs"><p>ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಊಟಿ ರಸ್ತೆಯಲ್ಲಿ ಹುಲಿಯೊಂದು ಮರಿಯಾನೆ ಮೇಲೆ ದಾಳಿ ಮಾಡಿದ್ದು, ಮರಿ ಮೃತಪಟ್ಟಿದೆ.</p></div>

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಊಟಿ ರಸ್ತೆಯಲ್ಲಿ ಹುಲಿಯೊಂದು ಮರಿಯಾನೆ ಮೇಲೆ ದಾಳಿ ಮಾಡಿದ್ದು, ಮರಿ ಮೃತಪಟ್ಟಿದೆ.

   

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಊಟಿ ರಸ್ತೆಯಲ್ಲಿ ಹುಲಿಯೊಂದು ಮರಿಯಾನೆ ಮೇಲೆ ದಾಳಿ ಮಾಡಿದ್ದು, ಮರಿ ಮೃತಪಟ್ಟಿದೆ.

ಮೂರು ದಿನಗಳ ಹಿಂದೆಯೇ ಹುಲಿ ದಾಳಿ ಮಾಡಿದ್ದು, ಅಸ್ವಸ್ಥಗೊಂಡಿದ್ದ ಮರಿಯಾನೆ ಶನಿವಾರ ಹೆದ್ದಾರಿ ಬದಿ ಬಿದ್ದು ಮೃತಪಟ್ಟಿದೆ. ಆನೆಗೆ ನಾಲ್ಕು ತಿಂಗಳು ಆಗಿರಬಹುದು ಎಂದು ಅಂದಾಜಿಸಲಾಗಿದೆ.

ADVERTISEMENT

ಬಂಡೀಪುರದಿಂದ ಕೆಕ್ಕನಹಳ್ಳ ಚೆಕ್ ಪೋಸ್ಟ್ ಕಡೆಗೆ ಮೂರು ಕಿ.ಮೀ ದೂರದಲ್ಲಿ ಮರಿಯಾನೆ ಮೃತಪಟ್ಟಿದೆ.

ತಾಯಾನೆಯು ಮರಿಯ ಕಳೇಬರದ ಬಳಿ ನಿಂತು ರೋದಿಸುತ್ತಿದ್ದುದರಿಂದ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಕಿ.ಮೀ ಗಟ್ಟಲೆ ವಾಹನಗಳು ಸಾಲು ನಿಂತಿದ್ದವು.

ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮರಿಯಾನೆ ಮೃತದೇಹವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.