ADVERTISEMENT

ಬಸವ ಬಳಗದಿಂದ ಬಸವೇಶ್ವರ ಜಯಂತಿ

​ಪ್ರಜಾವಾಣಿ ವಾರ್ತೆ
Published 3 ಮೇ 2025, 14:47 IST
Last Updated 3 ಮೇ 2025, 14:47 IST
ಸಂತೇಮರಹಳ್ಳಿಯಲ್ಲಿ ಬಸವ ಬಳಗದ ವತಿಯಿಂದ ಬಸವೇಶ್ವರ ಜಯಂತಿಯನ್ನು ಆಚರಿಸಲಾಯಿತು
ಸಂತೇಮರಹಳ್ಳಿಯಲ್ಲಿ ಬಸವ ಬಳಗದ ವತಿಯಿಂದ ಬಸವೇಶ್ವರ ಜಯಂತಿಯನ್ನು ಆಚರಿಸಲಾಯಿತು   

ಸಂತೇಮರಹಳ್ಳಿ: ಗ್ರಾಮದ ಬಸವ ಬಳಗದಿಂದ ಬಸವೇಶ್ವರ ಜಯಂತಿಯನ್ನು ಈಚೆಗೆ ಆಚರಿಸಲಾಯಿತು.

ಬಸವೇಶ್ವರ ಭಾವಚಿತ್ರಕ್ಕೆ ಗ್ರಾಮಸ್ಥರು ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡ ಮಹದೇವಪ್ರಸಾದ್ ಮಾತನಾಡಿ, ‘ಬಸವಣ್ಣನವರು ಸರಳವಾದ ವಚನಗಳ ಮೂಲಕ ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸಮಾಜವನ್ನು ಬದಲಾಯಿಸಿದ ಮಹಾನ್ ವ್ಯಕ್ತಿ. 12ನೇ ಶತಮಾನದಲ್ಲಿ ಇವರ ವಚನ ಹಾಗೂ ಸಾಮಾಜಿಕ ಕ್ರಾಂತಿ ಇಂದಿಗೂ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಇವರ ತತ್ವ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿ ದೀಪವಾಗಬೇಕು’ ಎಂದು ತಿಳಿಸಿದರು.‌

ಮುಖಂಡರಾದ ನಂಜುಂಡಸ್ವಾಮಿ, ಪರಶಿವಮೂರ್ತಿ, ಗುರುಪಾದಸ್ವಾಮಿ ಪಟೇಲ್, ಎಂ.ಮಂಜು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.