
ಕೊಳ್ಳೇಗಾಲ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಮುಖ್ಯಮಂತ್ರಿಯಾಗಲಿ ಎಂದು ಹರಕೆ ಹೊತ್ತು ಬೆಂಗಳೂರಿನಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಪಾದಯಾತ್ರೆ ಮೂಲಕ ಆಗಮಿಸಿದ್ದ ವಿಜಯೇಂದ್ರ ಯುವಸೇನೆ ತಂಡದವರನ್ನು ಇಲ್ಲಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಪದಾಧಿಕಾರಿಗಳು ಶುಕ್ರವಾರ ಸ್ವಾಗತಿಸಿದರು.
ಕಳೆದ ಫೆ.15 ರಂದು ಬೆಂಗಳೂರಿನಿಂದ ಹೊರಟು ಕೊಳ್ಳೇಗಾಲದ ಕೊಂಗವೀರೇಗೌಡನ ಹಾಸ್ಟೆಲ್‌ಗೆ ಆಗಮಿಸಿದ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಯುವಸೇನೆಯ ದೀಪಕ್, ಮಹೇಶ್, ಶಶಿ ನೇತೃತ್ವದ ಸುಮಾರು 150 ಮಂದಿ ಬೆಂಬಲಿಗರನ್ನು ಅದ್ದೂರಿ ಕಲಾತಂಡದೊಂದಿಗೆ ಬಿಳ್ಕೊಡಲಾಯಿತು.
ಯುವಸೇನೆ ಬಳಗದವರು 23ರ ಸೋಮವಾರ ಮಹದೇಶ್ವಬೆಟ್ಟ ತಲುಪಲಿದ್ದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ತಾಲ್ಲೂಕು ಅಧ್ಯಕ್ಷ ತಿಮ್ಮರಾಜೀಪುರ ಪುಟ್ಟಣ್ಣ, ಮಹಾಸಭೆ ನಿರ್ದೇಶಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.