ಬಿಜೆಪಿ
ಕೊಳ್ಳೇಗಾಲ/ಚಾಮರಾಜನಗರ: ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಅಡ್ಡಿಯಾದ ಆರೋಪದ ಮೇಲೆ ಕೊಳ್ಳೇಗಾಲ ನಗರಸಭೆಯ 10 ಬಿಜೆಪಿ ಸದಸ್ಯರು, ಚಾಮರಾಜನಗರ ನಗರಸಭೆ ಒಬ್ಬ ಸದಸ್ಯರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಕೊಳ್ಳೇಗಾಲ ನಗರಸಭೆಯ ಧರಣೇಶ್, ಮಾನಸ ಪ್ರಭುಸ್ವಾಮಿ, ನಾಸಿರ್ ಶರೀಫ್, ಕವಿತಾ, ನಾಗೇಂದ್ರ, ಜಿ.ಪಿ.ಶಿವಕುಮಾರ್, ಪವಿತ್ರಾ ರಮೇಶ್, ಪ್ರಕಾಶ್, ರಾಮಕೃಷ್ಣ, ನಾಗಸಂದ್ರಮ್ಮ ಹಾಗೂ ಚಾಮರಾಜನಗರ ನಗರಸಭೆಯ ಮಹದೇವಯ್ಯ ಉಚ್ಛಾಟನೆಗೊಂಡವರು.
ಪಕ್ಷದ ಶಿಸ್ತುಸಮಿತಿಯ ಸೂಚನೆಯ ಮೇರೆಗೆ 11 ಮಂದಿಯನ್ನು 6 ವರ್ಷ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.