ADVERTISEMENT

ನೆಮ್ಮದಿ ಜೀವನಕ್ಕೆ ಬುದ್ಧ ಸ್ಫೂರ್ತಿ: ಶಾಸಕ ಎ.ಆರ್.ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 3:13 IST
Last Updated 8 ನವೆಂಬರ್ 2025, 3:13 IST
ಸಂತೇಮರಹಳ್ಳಿ ಸಮೀಪದ ದೇಶವಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮುದಾಯ ಭವನ ಮುಂದುವರಿದ ಕಾಮಗಾರಿಗೆ ಅನುದಾನ ನೀಡಿದ ಹಿನ್ನೆಲೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಭಗವಾನ್ ಬುದ್ಧರ ಮೂರ್ತಿಗೆ ಪುಷ್ಪರ್ಚಾನೆ ನೆರವೇರಿಸಿದರು.
ಸಂತೇಮರಹಳ್ಳಿ ಸಮೀಪದ ದೇಶವಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮುದಾಯ ಭವನ ಮುಂದುವರಿದ ಕಾಮಗಾರಿಗೆ ಅನುದಾನ ನೀಡಿದ ಹಿನ್ನೆಲೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಭಗವಾನ್ ಬುದ್ಧರ ಮೂರ್ತಿಗೆ ಪುಷ್ಪರ್ಚಾನೆ ನೆರವೇರಿಸಿದರು.   

ಸಂತೇಮರಹಳ್ಳಿ: ನೆಮ್ಮದಿ ಜೀವನ ನಡೆಸಲು ಭಗವಾನ್ ಬುದ್ಧ ಅವರ  ಸಂದೇಶ ಪ್ರತಿಯೊಬ್ಬರಿಗೂ ದಾರಿ ದೀಪವಾಗುತ್ತದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

   ಭಗವಾನ್ ಬುದ್ಧ ಮೂರ್ತಿಗೆ ಪುಷ್ಪರ್ಚಾನೆ ನೆರವೇರಿಸಿ ಅವರು ಮಾತನಾಡಿದರು.  ತತ್ವ ಸಿದ್ದಾಂತದಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಗ್ರಾಮದಲ್ಲಿ ನಿರ್ಮಾಣವಾಗುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಕ್ಕೆ ಅನುದಾನ ನೀಡಿ  ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಗ್ರಾಮಪಂಚಾಯಿತಿ ಅಧ್ಯಕ್ಷೆ ತಾಯಮಣಿ, ಸದಸ್ಯರಾದ ರಾಜೇಶ್ವರಿ, ಶಿವಕುಮಾರ್, ಎಂ.ಪಿ.ಶಂಕರ್, ಅಭಿವೃದ್ಧಿ ಅಧಿಕಾರಿ ಮಮತ, ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಯೋಗೇಂದ್ರ, ನಿರ್ಮಿತಿ ಕೇಂದ್ರ ಎಂಜಿನಿಯರ್ ನಂದೀಶ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಡಿ.ಪಿ.ಪ್ರಕಾಶ್, ರೈತ ಮುಖಂಡ ಮಹೇಶ್‌ಕುಮಾರ್, ಮುಖಂಡರಾದ ಡಿ.ಪಿ.ರಾಜು, ಟೈಲರ್ ಶ್ರೀನಿವಾಸ್, ಸಂತೇಮರಹಳ್ಳಿ ಮಹದೇವಪ್ರಸಾದ್, ಉಮ್ಮತ್ತೂರು ಶಿವಣ್ಣ, ಗಣಗನೂರು ನಾಗಯ್ಯ, ಹೆಗ್ಗವಾಡಿಪುರ ಮಾದೇಶ್, ಹೆಗ್ಗವಾಡಿ ರಾಜಣ್ಣ, ಗೌಡಹಳ್ಳಿ ರಾಜೇಶ್, ಹೊನ್ನೂರು ಕೃಷ್ಣಮೂರ್ತಿ, ಚುಂಗಡಿಪುರ ಸಿದ್ದರಾಜು, ರಾಮಸ್ವಾಮಿಗೌಡ, ಯಜಮಾನರಾದ ಕುಮಾರ್, ಮಂಟಯ್ಯ, ಪುಟ್ಟರಾಜು, ಅಂಬೇಡ್ಕರ್ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.