ಚಾಮರಾಜನಗರ: ಅಪ್ರತಿಮ ವೀರ, ರಾಜ ವೀರಮದಕರಿ ನಾಯಕರ ಸ್ಮಾರಕವನ್ನು ಶ್ರೀರಂಗಪಟ್ಟಣದಲ್ಲಿ ನಿರ್ಮಿಸಿ ಪ್ರತಿ ವರ್ಷ ಜಯಂತಿಯನ್ನು ಆಚರಿಸಬೇಕು ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು ಒತ್ತಾಯಿಸಿದರು.
ನಗರದ ನಂಜನಗೂಡು ರಸ್ತೆಯಲ್ಲಿರುವ ವಾಲ್ಮೀಕಿ ಆಟೊ ನಿಲ್ದಾಣದಲ್ಲಿ ನಾಯಕ ಸಮುದಾಯದಿಂದ ಹಮ್ಮಿಕೊಂಡಿದ್ದ ರಾಜ ವೀರಮದಕರಿ ನಾಯಕರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮದವೇರಿದ ಆನೆಯ ಮದಿಸಿದ ಮದಕರಿ ನಾಯಕರು ಬ್ರಿಟಿಷರು, ಮೊಘಲರ ವಿರುದ್ಧ ನಾಡಿನ ರಕ್ಷಣೆಗಾಗಿ ಹೋರಾಟ ಮಾಡಿದ್ದರು. ಕೆರೆ, ಕಟ್ಟೆ, ಮಠ, ಮಂದಿರಗಳನ್ನು ನಿರ್ಮಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು. ನಾಯಕರ ಇತಿಹಾಸವನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕಿದೆ ಎಂದರು.
ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಯಸುಂದರ, ಮಾಜಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಎಸ್‌ಟಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಬುಲೆಟ್ ಚಂದ್ರು, ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಪರಶಿವಮೂರ್ತಿ, ನಗರಸಭಾ ಮಾಜಿ ಸದಸ್ಯ ಚೆಂಗುಮಣಿ, ಮುಖಂಡರಾದ ಆರ್.ದೀಪಕ್ ಪಾಳೇಗಾರ, ನಾರಾಯಣ್, ಬದನಗುಪ್ಪೆ ನಾರಾಯಣ್, ಆಟೊ ಸುಬ್ಬಣ್ಣ, ಮಂಜು, ಶಂಕರ, ಲಕ್ಷ್ಮಣ, ಗುರು, ಕೆಂಚ, ರವಿ, ಮಹೇಶ್ ಕುಮಾರ್, ಸಿದ್ದರಾಜು, ಮಣಿ, ನಾಗೇಶ್, ವಿಶ್ವ, ರಘು, ಮಂಜು, ಮಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.