ADVERTISEMENT

ಚಾಮರಾಜನಗರ | ಎಲ್ಲೆಡೆ ವಿಘ್ನ ವಿನಾಯಕರ ಆರಾಧನೆ; ಗಣಪತಿ ಬಪ್ಪ ಮೋರೆಯಾ...

ಕಣ್ಮ ನ ಸೆಳೆಯುತ್ತಿರುವ ವಿವಿಧ ಮಾದರಿಯ ಮೂರ್ತಿಗಳು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 2:13 IST
Last Updated 29 ಆಗಸ್ಟ್ 2025, 2:13 IST
ಚಾಮರಾಜೇಶ್ವರ ದೇವಸ್ಥಾನ ಸಮೀಪದ ರಥಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿರುವ ಗೌರಿ–ಗಣೇಶ
ಚಾಮರಾಜೇಶ್ವರ ದೇವಸ್ಥಾನ ಸಮೀಪದ ರಥಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿರುವ ಗೌರಿ–ಗಣೇಶ   

ಚಾಮರಾಜನಗರ: ಸಾರ್ವಜನಿಕ ಗಣೇಶೋತ್ಸವ ಸಮಿತಿ, ಸಂಘ ಸಂಸ್ಥೆ ಹಾಗೂ ಸಂಘಟನೆಗಳ ವತಿಯಿಂದ ಜಿಲ್ಲೆಯಾದ್ಯಂತ ವಿಘ್ನ ನಿವಾರಕ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.

ನಗರದ ಚಾಮರಾಜೇಶ್ವರ ದೇವಸ್ಥಾನ ಸಮೀಪದ ರಥಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿ ವತಿಯಿಂದ 63ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಗೌರಿ–ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಯಿತು. ತಾತ್ಕಾಲಿಕವಾಗಿ ಹಬ್ಬದ ದಿನ ಚಿಕ್ಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು ಸೆ.5ರಂದು ‌‘ಆಪರೇಷನ್ ಸಿಂಧೂರ’ ಮಾದರಿಯ ಗಣಪತಿ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ ಎಂದು ಮಂಡಳಿ ಅಧ್ಯಕ್ಷ ಶಿವಣ್ಣ ತಿಳಿಸಿದ್ದಾರೆ.

ನಗರಸಭಾ ಅಧ್ಯಕ್ಷ ಸುರೇಶ್, ಎಸ್‌ಪಿ ಬಿ‌.ಟಿ‌.ಕವಿತಾ, ಹೆಚ್ಚುವರಿ ಎಸ್‌ಪಿ ಶಶಿಧರ್, ಡಿವೈಎಸ್‌ಪಿ ಲಕ್ಷ್ಮಯ್ಯ ಗಣಪನಿಗೆ ಮೊದಲ ಪೂಜೆ ಮಾಡಿದರು.

ADVERTISEMENT

ಬಿ.ಟಿ.ಕವಿತಾ ಮಾತನಾಡಿ, 63 ವರ್ಷಗಳಿಂದ ವಿಜೃಂಭಣೆಯಿಂದ ಸೌಹಾರ್ದತೆಯಿಂದ ಗಣೇಶ ಹಬ್ಬ ಆಚರಿಸಿಕೊಂಡು ಬಂದಿದ್ದು, ಈ ಬಾರಿಯೂ ಸೌಹಾರ್ದ ಮುಂದುವರಿಯಲಿ ಎಂದು ಆಶಿಸಿದರು.

ನಗರಸಭಾ ಅಧ್ಯಕ್ಷ ಸುರೇಶ್ ಮಾತನಾಡಿ, ಬ್ರಹ್ಮೋಸ್ ಕ್ಷಿಪಣಿ ಮೇಲೆ ವಿರಾಜಮಾನ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಶೀಘ್ರ ನಡೆಯಲಿದ್ದು ಜಾನಪದ ಕಲಾತಂಡಗಳೊಂದಿಗೆ ವಿಜೃಂಭಣೆಯಿಂದ ವಿಸರ್ಜನೆ ಮಾಡಲಾಗುವುದು ಎಂದರು.

ಗಣಪತಿ ಮಂಡಳಿ ಉಪಾಧ್ಯಕ್ಷ ಶಿವುವಿರಾಟ್, ಕಾರ್ಯಾಧ್ಯಕ್ಷ ಬುಲೆಟ್ ಚಂದ್ರನಾಯಕ, ಪ್ರಧಾನ ಕಾರ್ಯದರ್ಶಿಗಳಾದ. ಬಂಗಾರನಾಯಕ, ಮಹೇಶ್, ಎಸ್.ಕಿರಣ್, ರಮೇಶ್, ನಗರಸಭಾ ಸದಸ್ಯರಾದ ಸುದರ್ಶನ್ ಗೌಡ, ಶಿವರಾಜ್, ಮುಖಂಡರಾದ ಸುರೇಶ್ ನಾಯಕ, ಸುಂದರ್ ರಾಜ್, ಬಾಲಸುಬ್ರಹ್ಮಣ್ಯಂ, ನೂರೊಂದು ಶೆಟ್ಟಿ, ಶಾಂತಮೂರ್ತಿ ಕುಲಗಾಣ, ಸೈಯದ್ ರಫಿ, ಯ.ಮಾಧು, ಯ.ರಾಜುನಾಯಕ, ಚಂದ್ರಶೇಖರ, ಕುಮಾರ್, ನವೀನ್, ರಾಜು, ಶ್ರೀನಿಧಿ ಕುದರ್ ಇದ್ದರು.

ವಿನಾಯಕ ಗೆಳೆಯರ ಬಳಗ: ನಗರದ ಗಾಳಿಪುರ ಬಡಾವಣೆಯಲ್ಲಿ ಶ್ರೀವಿನಾಯಕ ಗೆಳೆಯರ ಬಳದ ವತಿಯಿಂದ ಗಣೇಶ ಪ್ರತಿಷ್ಠಾಪಿಸಲಾಗಿದೆ. ಆಜಾದ್ ಹಿಂದೂ ಸೇನೆಯ ರಾಜ್ಯಾಧ್ಯಕ್ಷ ಎಂ.ಎಸ್.ಪೃಥ್ವಿರಾಜ್‌, ಶ್ರೀವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ದೀಪಕ್, ಮುಖಂಡರಾದ ಮಹೇಂದ್ರ ಕುಮಾರ್, ನಂದೀಶ್, ಪ್ರಕಾಶ್, ಸುಹ್ವಾಸ್, ಪವನ್, ಬಂಗಾರನಾಯಕ, ಅಭಿ, ವೆಂಕಟೇಶ್ ಇತರರು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಅಲ್ಲಲ್ಲಿ ಗಣಪ: ಕೊಳದಬೀದಿಯಲ್ಲಿ ವಿಭಿನ್ನ ಬಣ್ಣಗಳಲ್ಲಿ ಗಣಪತಿ ಮೂರ್ತಿ ಕಂಗೊಳಿಸುತ್ತಿದ್ದು ಭಕ್ತರ ಗಮನ ಸೆಳೆಯುತ್ತಿದೆ. ಮೇಗಲ ನಾಯಕರ ಬೀದಿಯಲ್ಲಿ ಬ್ರಹ್ಮನ ಅವತಾರದ ಗಣಪತಿ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗಿದ್ದು ಆಕರ್ಷಕವಾಗಿದೆ.

ಮಾರಿಗುಡಿಯ ಸಮೀಪ ನವಿಲಿನ ವಾಹನದಲ್ಲಿ ಗಣಪತಿ ರಾರಾಜಿಸುತ್ತಿದೆ. ರೈಲ್ವೆ ಬಡಾವಣೆ ಪೋಸ್ಟ್ ಆಫೀಸ್ ಹಿಂಭಾಗದ ನಾಯಕರ ಬೀದಿಯಲ್ಲಿ ನಂದಿಯ ಮೇಲೆ ವಿರಾಜಮಾನವಾಗಿರುವ ಗಣಪ ಚಿತ್ತ ಸೆಳೆಯುವಂತಿದೆ. ದೇವಾಂಗ ಬೀದಿಯಲ್ಲೂ ನಂದಿಯ ಮೇಲೆ ಕುಳಿತ ಗಣಪ ಕಣ್ಮನ ಸೆಳೆಯುತ್ತಿದೆ.

ನಗರದ ಕೊಳದಬೀದಿಯಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ
ನಗರದ ಮೇಗಳ ನಾಯಕರ ಬೀದಿಯಲ್ಲಿ ಕೂರಿಸಿರುವ ಗಣಪತಿ
ನಗರದ ರೈಲ್ವೆ ಬಡಾವಣೆಯ ನಾಯಕರ ಬೀದಿಯಲ್ಲಿ ಪ್ರತಿಷ್ಠಾಪಿಸಿರುವ ಗಣಪ
ನಗರದ ಮಾರಿಗುಡಿ ಬೀದಿಯಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿ
ನಗರದ ದೇವಾಂಗ ಬೀದಿಯಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.