ADVERTISEMENT

ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಸಿ.ಎಂ ನಿರ್ಧಾರಕ್ಕೆ: ಉಮೇಶ ಕತ್ತಿ

ಮೇಕೆದಾಟು ಅರಣ್ಯ ಪ್ರದೇಶಕ್ಕೆ ಸಚಿವರ ಭೇಟಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 14:36 IST
Last Updated 7 ಆಗಸ್ಟ್ 2022, 14:36 IST
ಅರಣ್ಯ ಸಚಿವ ಉಮೇಶ ವಿ.ಕತ್ತಿ ಅವರು ಭಾನುವಾರ ಅರಣ್ಯ ಅಧಿಕಾರಿಗಳೊಂದಿಗೆ ಹನೂರು ತಾಲ್ಲೂಕು ವ್ಯಾಪ್ತಿಯ ಮೇಕೆದಾಟು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದರು
ಅರಣ್ಯ ಸಚಿವ ಉಮೇಶ ವಿ.ಕತ್ತಿ ಅವರು ಭಾನುವಾರ ಅರಣ್ಯ ಅಧಿಕಾರಿಗಳೊಂದಿಗೆ ಹನೂರು ತಾಲ್ಲೂಕು ವ್ಯಾಪ್ತಿಯ ಮೇಕೆದಾಟು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದರು   

ಹನೂರು: 'ಈ ಭಾಗದ ಆರಾಧ್ಯ ದೈವವಾಗಿರುವ ಮಹದೇಶ್ವರ ಸ್ವಾಮಿಯ ವಾಹನ ಹುಲಿಯಾಗಿರುವುದರಿಂದ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಣೆ ಮಾಡುವುದು ಒಳ್ಳೆಯದು. ಇದಕ್ಕೆ ನನ್ನದೇನು ಅಭ್ಯಂತರವಿಲ್ಲ’ ಎಂದು ಅರಣ್ಯ ಸಚಿವ ಉಮೇಶ ವಿ. ಕತ್ತಿ ಭಾನುವಾರ ಹೇಳಿದರು.

ಮೇಕೆದಾಟು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದರೆ ಅರಣ್ಯ ಸಂಪತ್ತು ವೃದ್ಧಿಯಾಗಲಿದೆ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವುದಿಲ್ಲ ಎಂದು ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಘೋಷಣೆ ಮಾಡಬೇಕೇ ಬೇಡವೇ ಎಂಬುದನ್ನು ಮುಖ್ಯಮಂತ್ರಿಗಳೇ ನಿರ್ಧರಿಸಲಿದ್ದಾರೆ’ ಎಂದರು.

‘ವನ್ಯಜೀವಿಮತ್ತುಕಾಡುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅರಣ್ಯ ಸಚಿವನಾಗಿ ನನಗೆ ವೈಯಕ್ತಿಕವಾಗಿ ಹುಲಿ ಸಂರಕ್ಷಿತ ಪ್ರದೇಶವಾಗುವುದು ಒಳ್ಳೆಯದು ಎಂಬ ಅಭಿಪ್ರಾಯವಿದೆ. ನಮ್ಮ ಅಭಿಪ್ರಾಯಗಳು ಏನೇ ಇದ್ದರೂಸಂಪುಟಸಭೆಯಲ್ಲಿ ಚರ್ಚಿಸಿಬಳಿಕ ಮುಖ್ಯಮಂತ್ರಿಗಳು ಕೈಗೊಳ್ಳುವತೀರ್ಮಾನವೇಅಂತಿಮ’ ಎಂದುಸ್ಪಷ್ಟಪಡಿಸಿದರು.

ADVERTISEMENT

ಮೇಕೆದಾಟು ಯೋಜನೆ ಖಚಿತ: ‘ಬೆಂಗಳೂರುನಗರಕ್ಕೆಕುಡಿಯುವನೀರಿನ ಅವಶ್ಯಕತೆ ಇದ್ದು ಮೇಕೆದಾಟುಯೋಜನೆಯನ್ನು ಜಾರಿ ಮಾಡಿಯೇ ಮಾಡುತ್ತೇವೆ. ಹೊಗೆನಕಲ್ ಜಲಪಾತ ವೀಕ್ಷಣಾಗೋಪುರ,ಸೇತುವೆಸೇರಿದಂತೆಕಾಡಂಚಿನಕುಗ್ರಾಮಗಳಿಗೆಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು. ಚಂಗಡಿಪುನರ್ವಸತಿ ಯೋಜನೆ ಬಗ್ಗೆ ಸರ್ಕಾರಸೂಕ್ತ ಕ್ರಮ ಕೈಗೊಳ್ಳಲಿದ್ದು, ಇನ್ನೆರಡು ತಿಂಗಳೊಳಗೆ ಅಂತಿಮ ಆದೇಶ ಹೊರಬೀಳಲಿದೆ’ ಎಂದರು.

ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ಮಲೆಮಹದೇಶ್ವರ ವನ್ಯಧಾಮದಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕುಂಡಲು, ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಂಕರಾಜು, ಭಾಗ್ಯಲಕ್ಷ್ಮಿ, ವಲಯ ಅರಣ್ಯಾಧಿಕಾರಿಗಳಾದ ಸಯ್ಯಾದ ಸಾಬ್ ನದಾಫ್, ಶಶಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.