ADVERTISEMENT

ಚಾಮರಾಜನಗರ | ಎಸ್‌ಸಿ, ಎಸ್‌ಟಿ ಸಭೆಗೆ ಅಧಿಕಾರಿಗಳು ಗೈರು: ದಲಿತ ಪ್ರಮುಖರ ಸಿಟ್ಟು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 2:32 IST
Last Updated 12 ನವೆಂಬರ್ 2025, 2:32 IST
<div class="paragraphs"><p>ಚಾಮರಾಜನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಗೆ ಬಂದಿದ್ದ ದಲಿತ ಸಂಘಟನೆಗಳ ಮುಖಂಡರು</p></div>

ಚಾಮರಾಜನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಗೆ ಬಂದಿದ್ದ ದಲಿತ ಸಂಘಟನೆಗಳ ಮುಖಂಡರು

   

ಚಾಮರಾಜನಗರ: ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಗೆ ತಹಶೀಲ್ದಾರ್ ಹಾಗೂ ಡಿವೈಎಸ್‌ಪಿ ಹಾಜರಾಗದ್ದಕ್ಕೆ ಸಿಟ್ಟಿಗೆದ್ದ ದಲಿತ ಸಂಘಟನೆಗಳ ಮುಖಂಡರು ಸಭೆ ಬಹಿಷ್ಕಾರ ಮಾಡಿ ಹೊರ ನಡೆದರು.

ತಾಲ್ಲೂಕು ವ್ಯಾಪ್ತಿಯ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಮಿತಿ ಸಭೆಗೆ ಪ್ರಮುಖವಾಗಿ ಹಾಜರಾಗಬೇಕಿದ್ದ ತಹಶೀಲ್ದಾರ್ ಗಿರಿಜಾ, ಹಾಗೂ ಡಿವೈಎಸ್‌ಪಿ ಸ್ನೇಹಾ ರಾಜ್ ಗೈರಾಗಿದ್ದರು. ಹಿರಿಯ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಇತರೆ ಅಧಿಕಾರಿಗಳು ಸಭೆಯನ್ನು ನಡೆಸಲು ಮುಂದಾದಾಗ ದಲಿತ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ದಲಿತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ತಹಶೀಲ್ದಾರ್ ಗಿರಿಜಾ ಹೈಕೋರ್ಟ್‌ ಪ್ರಕರಣವೊಂದರಲ್ಲಿ ಹಾಜರಾಗಲು ಬೆಂಗಳೂರಿಗೆ ತೆರಳಿದ್ದರು. ಡಿವೈಎಸ್‌ಪಿ ಸ್ನೇಹರಾಜ್ ಗುಂಡ್ಲುಪೇಟೆ ತಾಲ್ಲೂಕಿನ ಹಸಗೂಲಿ ಜಾತ್ರೆ, ಎಣ್ಣೆಹೊಳೆ ಮಹದೇಶ್ವರ ಸ್ವಾಮಿ ಜಾತ್ರೆ ಬಂದೋಬಸ್ತ್‌ಗೆ ನಿಯೋಜನೆಯಾಗಿದ್ದರಿಂದ ಸಭೆಗೆ ಹಾಜರಾಗಿರಲಿಲ್ಲ ಎನ್ನಲಾಗಿದೆ. ಇಬ್ಬರು ಅಧಿಕಾರಿಗಳು ಸಭೆಗೆ ಹಾಜರಾಗದೆ ಸಭೆ ನಡೆಸಿ ಪ್ರಯೋಜನವಿಲ್ಲ ಎಂದು ದಲಿತ ಮುಖಂಡರು ಹೊರನಡೆದರು.

ಸಭೆಯಲ್ಲಿ ಜ್ಯೋತಿಗೌಡನಪುರದಲ್ಲಿ ಈಚೆಗೆ ನಡೆಸ ಬುದ್ದ ಹಾಗೂ ಅಂಬೇಡ್ಕರ್ ವಿಗ್ರಹ ವಿರೂಪ ಪ್ರಕರಣ, ಬದನಗುಪ್ಪೆಯಲ್ಲಿ ಅಂಬೇಡ್ಕರ್ ನಾಮಫಲಕ ಅಳವಡಿಕೆಗೆ ವಿರೋಧ ಹಾಗೂ ಸ್ಥಳ ವಿವಾದ ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೇಲಿನ ದೌರ್ಜನ್ಯ ಕುರಿತು ಚರ್ಚೆ ನಡೆಯಬೇಕಿತ್ತು. ಆದರೆ ಅಧಿಕಾರಿಗಳ ಗೈರಿನಿಂದ ಚರ್ಚೆ ನಡೆಯಲಿಲ್ಲ ಎಂದು ಮುಖಂಡರು ಬೇಸರ ವ್ಯಕ್ತಪಡಿಸಿದರು.

ಎಸ್‌ಸಿ ಎಸ್‌ಟಿ ಹಿತರಕ್ಷಣಾ ಸಮಿತಿ ಸಭೆಯನ್ನು ತಾಲೂಕು ಮಟ್ಟದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ದಲಿತರು ಕೆಲಸ ಕಾರ್ಯಗಳನ್ನು ಬದಿಗಿಟ್ಟು ಸಭೆಗೆ ಬಂದರೂ ಅಧಿಕಾರಿಗಳು ಬಾರದಿರುವುದು ಬೇಸರದ ವಿಚಾರ. ಹಿಂದೆಯೂ ಹಲವು ಬಾರಿ ಸಭೆ ಮುಂದೂಡಲ್ಪಟ್ಟಿದೆ. ಅಧಿಕಾರಿಗಳಿಗೆ ದಲಿತರ ಬಗ್ಗೆ ತಾತ್ಸಾರ ಮನೋಭಾವ ಇದ್ದಂತೆ ಕಾಣುತ್ತಿದ್ದು ವಾರದೊಳಗೆ ಸಭೆ ನಡೆಸಬೇಕು ಎಂದು ಅಂಬೇಡ್ಕರ್ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ. ಮಂಜುನಾಥ್ ಹಾಗೂ ಮುಖಂಡ ಮಹೇಶ್ ಕುದರ್ ಒತ್ತಾಯಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಇಒ ಗಿರಿಧರ್, ಸಮಾಜ ಕಲ್ಯಾಣಾಧಿಕಾರಿ ಮೇಘಾ, ತಾಲ್ಲೂಕು ಪರಿಶಿಷ್ಟ ವರ್ಗಗಳ ಅಧಿಕಾರಿ ಸುಬ್ಬಾರಾಯ್, ತಾಲ್ಲೂಕು ಅಧೀಕ್ಷಕಿ ಜುಬೀನಾ, ಶಿರಸ್ತೇದಾರ್ ಪ್ರಕಾಶ್, ದಲಿತ ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ, ಸಿ.ಎಂ.ಶಿವಣ್ಣ, ನಾಗೇಶ್, ಪರ್ವತರಾಜ್, ಬ್ಯಾಡಮೂಡ್ಲು ಬಸವಣ್ಣ, ನಾಗೇಶ್, ದಡದಹಳ್ಳಿ ಶಂಕರ್ ಅನೇಕ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.