ADVERTISEMENT

ದಸರಾ ಕ್ರೀಡಾಕೂಟ | ಬೇಕಾದವರ ಆಯ್ಕೆ: ಕ್ರೀಡಾಪಟುಗಳ ಆರೋಪ

ಮಾಹಿತಿ ನೀಡದೆ ಒಂದು ದಿನ ಮೊದಲೇ ವಿಭಾಗೀಯ ಮಟ್ಟಕ್ಕೆ ಆಯ್ಕೆಯ ಸ್ಪರ್ಧೆ: ಅಧಿಕಾರಿಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 15:00 IST
Last Updated 21 ಸೆಪ್ಟೆಂಬರ್ 2019, 15:00 IST
ಸಮಸ್ಯೆ ಹೇಳಿಕೊಂಡ ಕ್ರೀಡಾಪಟು
ಸಮಸ್ಯೆ ಹೇಳಿಕೊಂಡ ಕ್ರೀಡಾಪಟು   

ಚಾಮರಾಜನಗರ: ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದ ವೇದಿಕೆ ಕಾರ್ಯಕ್ರಮದಲ್ಲಿ ಕೆಲವು ಕ್ರೀಡಾಪಟುಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ವಿಭಾಗೀಯ ಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳನ್ನು ಆಯ್ಕೆ ಮಾಡುವುದಕ್ಕಾಗಿ ಸ್ಪರ್ಧೆಗಳನ್ನು ಒಂದು ದಿನ ಮುಂಚಿತವಾಗಿ ನಡೆಸಿ ತಮಗೆ ಬೇಕಾದ ಕ್ರೀಡಾಪಟುಗಳನ್ನು ಆಯ್ಕೆ ಮಾಡಿದ್ದಾರೆ ಎಂದು ವಿವಿಧ ತಾಲ್ಲೂಕಿನಿಂದ ಬಂದಿದ್ದ ಕ್ರೀಡಾಳುಗಳು ಆರೋಪಿಸಿದರು.

ಇಲಾಖೆಯ ಸಹಾಯಕ ನಿರ್ದೇಶಕ ಚಲುವಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕ್ರೀಡಾಪಟುಗಳು,‘ತಾಲ್ಲೂಕುಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಿರುವವರಿಗೆ ಮಾಹಿತಿ ನೀಡದೆ ಒಂದು ದಿನ ಮುಂಚಿತವಾಗಿ ಜಿಲ್ಲಾಮಟ್ಟದ ಸ್ಪರ್ಧೆಗಳನ್ನು ನಡೆಸಲಾಗಿದೆ’ ಎಂದು ದೂರಿದರು.

ADVERTISEMENT

ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರನಡೆದಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ ನಂತರ ವೇದಿಕೆಗೆ ಬಂದ ಕೆಲಕ್ರೀಡಾಪಟುಗಳು ‘ನಮಗೆಅನ್ಯಾಯವಾಗಿದೆ. ಇಂದು (ಶನಿವಾರ) ಜಿಲ್ಲಾಮಟ್ಟದ ಕ್ರೀಡೆಗಳು ನಡೆಯುತ್ತವೆ ಎಂಬ ಮಾಹಿತಿಯನ್ನುಪತ್ರಿಕೆಯಲ್ಲಿ ನೋಡಿಕೊಂಡು ಬಂದೆವು. ಆದರೆ, ಇಲ್ಲಿ ನೋಡಿದರೆ ಶುಕ್ರವಾರ ಅನೇಕ ಸ್ಪರ್ಧೆಗಳನ್ನು ನಡೆಸಿದ್ದಾರೆ. ಇದರಿಂದ ವರ್ಷಪೂರ್ತಿ ಪಟ್ಟ ಶ್ರಮ ವ್ಯರ್ಥವಾಗಿದೆ’ಎಂದು ವೇದಿಕೆಯಲ್ಲಿದ್ದ ಗಣ್ಯರ ಬಳಿ ಅಳಲು ತೋಡಿಕೊಂಡರು.

ಫೋನ್‌ ಮೂಲಕ ಮಾಹಿತಿ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚಲುವಯ್ಯ ಅವರು ,‘ಸೆ. 18ರಂದು ತಾಲ್ಲೂಕುಮಟ್ಟದ ಕ್ರೀಡಾಕೂಟಗಳನ್ನು ಮುಗಿಸಲಾಗಿದೆ. 20ರಂದು ಅಥ್ಲೆಟಿಕ್ಸ್‌ ನಡೆಸುವಂತೆ ಇಲಾಖೆಯಿಂದ 18ರಂದು ಆದೇಶ ಬಂತು.ಹೀಗಾಗಿ,ತುರ್ತಾಗಿ ಪತ್ರಿಕಾ ಪ್ರಕಟಣೆನೀಡುವ ಜೊತೆಗೆಫೋನ್ ಮೂಲಕ ಎಲ್ಲ ಕ್ರೀಡಾಪಟುಗಳಿಗೂ ಮಾಹಿತಿ ತಿಳಿಸಿದ್ದೇವೆ. ಕರೆ ಸಿಗದ ಕೆಲವರಿಗೆ ಮಾಹಿತಿ ತಿಳಿಸುವಂತೆಯೂ ಸಂಬಂಧಪಟ್ಟವರಿಗೆ ಸೂಚಿಸಿದ್ದೇವೆ. ಕರೆ ಸಿಗದ ಕ್ರೀಡಾಪಟುಗಳಿಗೆ ಮಾಹಿತಿ ಸಿಕ್ಕಿಲ್ಲ’ ಎಂದು ಹೇಳಿದರು.

‘ಅಧಿಕೃತವಾಗಿ ಶನಿವಾರ ಜಿಲ್ಲಾಮಟ್ಟದ ಕ್ರೀಡೆಗಳು ನಡೆಯಬೇಕು. ನಮಗೆ ಫೋನ್ ಕೂಡ ಮಾಡಿಲ್ಲ. ತಮಗೆ ಬೇಕಾದವರನ್ನು ಮಾತ್ರ ಸಂಪರ್ಕಿಸಿದ್ದಾರೆ’ ಎಂದು ಕ್ರೀಡಾಪಟುಗಳಾದ ಬಿಂದು, ಸಾಗರ್, ರಾಧಿಕಾಅಸಮಾಧಾನ ವ್ಯಕ್ತಪಡಿಸಿದರು.

ಉದ್ಘಾಟನೆ: ಇದಕ್ಕೂ ಮೊದಲು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಜಿ.ಬಸವಣ್ಣ ಅವರು ಕ್ರೀಡಾಕೂಟ ಉದ್ಘಾಟಿಸಿದರು.‘ಕ್ರೀಡೆಗಳಲ್ಲಿ ಭಾಗವಹಿಸುವ ಎಲ್ಲರೂ ಕ್ರೀಡಾ ಮನೋಭಾವದಿಂದ ಆಡಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಡಿವೈಎಸ್‌ಪಿ ಜೆ.ಮೋಹನ್‌ ಮತ್ತಿತರರು ಇದ್ದರು.

‘ನಮಗೆ ಮಾಹಿತಿ ನೀಡಿಲ್ಲ’

‘ತಾಲ್ಲೂಕುಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಮೊದಲ ಸ್ಥಾನ ಪಡೆದ ನಮಗೆ ಸೆ.21ರಂದುಜಿಲ್ಲಾ ಕೇಂದ್ರದಲ್ಲಿನಡೆಯುವ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ತಿಳಿಸಿದ್ದರು. ಅಲ್ಲದೆ, ಪತ್ರಿಕೆಗಳಲ್ಲೂ ಈ ವಿಷಯ ಪ್ರಕಟವಾಗಿತ್ತು. ಅದರಂತೆ, ನಾವು ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಕೇಳಿದೆವು. ಆಗ ಅವರು, ‘ಅಥ್ಲೆಟಿಕ್ಸ್‌ ಸ್ಪರ್ಧೆಗಳನ್ನುಶುಕ್ರವಾರವೇ ನಡೆಸಿಆಯ್ಕೆಯಾದವರನ್ನು ವಿಭಾಗೀಯ ಮಟ್ಟಕ್ಕೆ ಕಳುಹಿಸಿದ್ದೇವೆ’ ಎಂದರು. ಮೊದಲೇ ಸ್ಪರ್ಧೆ ನಡೆಸುವ ಬಗ್ಗೆ ನಮಗೆ ಯಾರೂ ಮಾಹಿತಿ ನೀಡಿಲ್ಲ’ ಎಂದು ಕ್ರೀಡಾಪಟು ಮನೋಜ್‌ ಕುಮಾರ್ದೂರಿದರು.

‘ಶುಕ್ರವಾರವೇ ಡಿಸ್ಕಸ್‌ ಎಸೆತ, ಗುಂಡು ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ ಸ್ಪರ್ಧೆಗಳನ್ನು ನಡೆಸಲಾಗಿದೆ’ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.