ADVERTISEMENT

ಚಾಮರಾಜನಗರ: ಈದ್‌ ಮಿಲಾದ್‌ ಸರಳ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 2:49 IST
Last Updated 20 ಅಕ್ಟೋಬರ್ 2021, 2:49 IST
ಈದ್ ಮಿಲಾದ್ ಪ್ರಯುಕ್ತ ಚಾಮರಾಜನಗರದ ಮದೀನ ಅಹ್ಲೆ ಸುನ್ನತುಲ್ ಜಮಾತ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಕಾಮಿಲ್ ನಯೀಮುಲ್ ಹಕ್ ಮಾತನಾಡಿದರು. ಧರ್ಮಗುರುಗಳಾದ ಮುಫ್ತಿ ಜಾಫರ್ ಹುಸೇನ್, ನಯೀಮ್ ಉಲ್ ಹಕ್, ಸೈಯದ್ ರೈಸ್ ಅಹಮದ್, ಸೈಯದ್ ಫುರಕಾನ್ ಅಹಮದ್, ಉಮ್ಮರ್ ಸಾಬ್ ಮಸ್‌ಜಿದ್, ರಂಗಕರ್ಮಿ ಕೆ.ವೆಂಕಟರಾಜು ಇದ್ದಾರೆ

ಚಾಮರಾಜನಗರ: ಪ್ರವಾದಿ ಮಹ ಮ್ಮದ್‌ ಜನ್ಮ ದಿನದ ಅಂಗವಾಗಿ ಜಿಲ್ಲೆಯಾ ದ್ಯಂತ ಮುಸ್ಲಿಮರು ಮಂಗಳವಾರ ಸಂಭ್ರಮ, ಸಡಗರದಿಂದ ಸರಳವಾಗಿ ಈದ್‌ ಮಿಲಾದ್‌ ಆಚರಿಸಿದರು.

ಕೋವಿಡ್‌ ಮುಂಜಾಗ್ರತಾ ಕ್ರಮವಾಗಿ ಸಾಮೂಹಿಕ ಮೆರವಣಿಗೆ ಯನ್ನು ಜಿಲ್ಲಾಡಳಿತ ನಿರ್ಬಂಧಿಸಿತ್ತು. ಹಾಗಾಗಿ, ಹಬ್ಬದ ಆಚರಣೆ, ಮಸೀದಿ, ದರ್ಗಾ, ಮನೆಗಳಿಗೆ ಸೀಮಿತವಾಗಿತ್ತು. ಕೆಲವು ಮಸೀದಿಗಳಲ್ಲಿ ಮಂಗಳವಾರ ಸಂಜೆ ಹಬ್ಬದ ಅಂಗವಾಗಿ ವಿಶೇಷ ಪ್ರವಚನ ನಡೆಯಿತು.

ಹಿರಿಯರು, ಮಹಿಳೆಯರು, ಮಕ್ಕಳು ಮನೆಗಳಲ್ಲೇ ಪ್ರಾರ್ಥನೆ ಮತ್ತು ಕುರ್‌ ಅನ್‌ ಪಠಣದಲ್ಲಿ ತೊಡಗಿಕೊಂಡರು. ಉಳಿದವರು ಮಸೀದಿಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕುಟುಂಬ ಸಮೇತರಾಗಿ ದರ್ಗಾಗಳಿಗೆ ಭೇಟಿ ನೀಡಿದ ಮುಸ್ಲಿಂ ಸಮುದಾಯದವರು ಅಲ್ಲೂ ಪ್ರಾರ್ಥನೆ ಸಲ್ಲಿಸಿದರು.

ADVERTISEMENT

ಸಂದೇಶ: ಸಂಜೆ ಮಸೀದಿಗಳಲ್ಲಿ ನಡೆದ ಪ್ರವಚನದಲ್ಲಿ ಧರ್ಮಗುರುಗಳು ಪ್ರವಾದಿ ಮಹಮ್ಮದ್‌ ಅವರ ತತ್ವ, ಸಿದ್ಧಾಂತ, ಆದರ್ಶಗಳ ಸಂದೇಶಗಳನ್ನು ಸಮುದಾಯದವರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.