ADVERTISEMENT

ಹಣಕಾಸು ವಿಚಾರಕ್ಕೆ ಜಗಳ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 7:31 IST
Last Updated 3 ಜನವರಿ 2026, 7:31 IST
ನಾಗಣ್ಣ
ನಾಗಣ್ಣ   

ಗುಂಡ್ಲುಪೇಟೆ: ಹಣಕಾಸು ವಿಚಾರಕ್ಕೆ ಜಗಳವಾಗಿ ತಾಲ್ಲೂಕಿನ ವೀರನಪುರ ಗ್ರಾಮದ ರೈತ ನಾಗಣ್ಣ (40) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಕೇರಳ ಮೂಲದ ಮನ್ಸೂರ್ ಜೊತೆ ಗ್ರಾಮದ ಮಹದೇವಪ್ಪ ಅವರ ಜಮೀನನ್ನು ಗುತ್ತಿಗೆ ಪಡೆದುಕೊಂಡು ವ್ಯವಸಾಯ ಮಾಡಿ ಬಂದ ಲಾಭದಲ್ಲಿ ಸಮನಾಗಿ ಹಂಚಿಕೆ ಮಾಡಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆಯೇ ಜಮೀನಿನಲ್ಲಿ ಆಲೂಗೆಡ್ಡೆ, ಈರುಳ್ಳಿ, ಕೋಸು ಸೇರಿದಂತೆ ತರಕಾರಿ ಬೆಳೆದು ಬಂದ ಲಾಭದಲ್ಲಿ ನಾಗಣ್ಣ ಅವರಿಗೆ ಹಣ ನೀಡಲಿಲ್ಲ ಎಂಬ ವಿಚಾರವಾಗಿ ಇಬ್ಬರ ನಡುವೆ ಪರಸ್ಪರ ಮಾತು ಬೆಳೆದು ಮನ್ಸೂರ್ ಅಶ್ಲೀಲವಾಗಿ ನಿಂದಿಸಿದ್ದಾರೆ. ಇದರಿಂದ ಮನನೊಂದ ನಾಗಣ್ಣ ಗುರುವಾರ ರಾತ್ರಿ ಹುಣಸೆ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ.

ನಾಗಣ್ಣ ಅವರ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಕೇರಳ ಮೂಲದ ಮನ್ಸೂರ್ ಹಾಗೂ ಪ್ರಸನ್ನ ಅವರ ವಿರುದ್ಧ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.