ADVERTISEMENT

ಯಡಬೆಟ್ಟದಲ್ಲಿ ಬೆಂಕಿ: ಹತ್ತಾರು ಎಕರೆ ಪ್ರದೇಶ ಭಸ್ಮ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 16:37 IST
Last Updated 7 ಫೆಬ್ರುವರಿ 2021, 16:37 IST
ಯಡಬೆಟ್ಟದಲ್ಲಿರುವ ವೈದ್ಯಕೀಯ ಕಾಲೇಜಿನ ಹಿಂಭಾದ ಗುಡ್ಡಕ್ಕೆ ಭಾನುವಾರ ಬೆಂಕಿ ಬಿದ್ದು, ಹತ್ತಾರು ಎಕರೆ ಪ್ರದೇಶ ಸುಟ್ಟಿದೆ
ಯಡಬೆಟ್ಟದಲ್ಲಿರುವ ವೈದ್ಯಕೀಯ ಕಾಲೇಜಿನ ಹಿಂಭಾದ ಗುಡ್ಡಕ್ಕೆ ಭಾನುವಾರ ಬೆಂಕಿ ಬಿದ್ದು, ಹತ್ತಾರು ಎಕರೆ ಪ್ರದೇಶ ಸುಟ್ಟಿದೆ   

ಚಾಮರಾಜನಗರ: ಸಮೀಪದ ಯಡಬೆಟ್ಟ ಪ್ರದೇಶದ ಗುಡ್ಡವೊಂದಕ್ಕೆ ಭಾನುವಾರ ಮಧ್ಯಾಹ್ನ ಬೆಂಕಿ ಬಿದ್ದಿದ್ದು, ಹತ್ತಾರು ಎಕರೆ ಪ್ರದೇಶ ಸುಟ್ಟು ಹೋಗಿದೆ.

ವೈದ್ಯಕೀಯ ಕಾಲೇಜಿನ ಹಿಂಭಾಗದ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳ ಹಾಗೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಬೆಂಕಿ ನಂದಿಸಲು ಪ್ರಯತ್ನ ನಡೆಸಿದರು.

ಈ ಭಾಗದಲ್ಲಿ ದೊಡ್ಡ ಮರಗಳು ಇಲ್ಲ. ಕುರುಚಲು ಗಿಡಗಳು ಹಾಗೂ ಹುಲ್ಲು ಇವೆ. ಇಲ್ಲಿನ ಗುಡ್ಡಗಳಿಗೆ ಪ್ರತಿ ವರ್ಷ ಬೇಸಿಗೆಯಲ್ಲಿ ಬೆಂಕಿ ಬೀಳುತ್ತದೆ.

ADVERTISEMENT

ಭಾನುವಾರ ಮಧ್ಯಾಹ್ನ ಬಿದ್ದ ಬೆಂಕಿ, ರಾತ್ರಿವರೆಗೂ ನಿಯಂತ್ರಣಕ್ಕೆ ಬಂದಿರಲಿಲ್ಲ.

‘ಕಂದಾಯ ಇಲಾಖೆಗೆ ಸೇರಿದ ಗುಡ್ಡಕ್ಕೆ ಬೆಂಕಿ ಬಿದ್ದಿದೆ. ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿಯೂ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಶೀಘ್ರದಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರು‌ತ್ತೇವೆ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.