ADVERTISEMENT

ಪೊಲೀಸ್‌ ಜೀಪಿನಿಂದ ಜಿಗಿದು ಯುವಕ ಸಾವು; ಐವರು ಪೊಲೀಸರ ಅಮಾನತು, ಪ್ರಕರಣ ಸಿಐಡಿಗೆ‌

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 16:26 IST
Last Updated 30 ನವೆಂಬರ್ 2022, 16:26 IST

ಚಾಮರಾಜನಗರ: ಬಾಲಕಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆಗೆ ಕರೆದೊಯ್ಯುತ್ತಿದ್ದಾಗ ಯುವಕ ಜೀಪಿನಿಂದ ಹೊರಗಡೆ ಜಿಗಿದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪೊಲೀಸ್‌ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಜೊತೆಗೆ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಮೂವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಎಸ್ಪಿ ಟಿ.ಪಿ.ಶಿವಕುಮಾರ್‌ ತಿಳಿಸಿದ್ದಾರೆ.

ಯಳಂದೂರು ಸರ್ಕಲ್‌ ಇನ್‌ಸ್ಪೆಕ್ಟರ್‌ ಶಿವಮಾದಯ್ಯ, ಮಾಂಬಳ್ಳಿ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಮಾದೇಗೌಡ, ಎಎಸ್‌ಐ ಚೆಲುವರಾಜು, ಮಹಿಳಾ ಕಾನ್‌ಸ್ಟೆಬಲ್‌ ಭದ್ರಮ್ಮ, ಕಾನ್‌ಸ್ಟೆಬಲ್‌ ಸೋಮಶೇಖರ್‌ ಅಮಾನತುಗೊಂಡವರು.

ADVERTISEMENT

ಶಿವಮಾದಯ್ಯ, ಮಾದೇಗೌಡ ಹಾಗೂ ಸೋಮಶೇಖರ್‌ ವಿರುದ್ಧ ಎಫ್‌ಐಆರ್‌ ಕೂಡ ದಾಖಲಾಗಿದೆ.

ಪ್ರತಿಭಟನೆ: ಈ ಮಧ್ಯೆ, ಶಿವಮಾದಯ್ಯ ಅವರ ಅಮಾನತು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ಯಳಂದೂರಿನಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಸೇವಾ ಸಮಿತಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.