ADVERTISEMENT

ಕೋವಿಡ್: 46 ಹೊಸ ಪ್ರಕರಣ, 43 ಮಂದಿ ಗುಣಮುಖ

ಒಂದೇ ದಿನ ದಾಖಲೆಯ 1,290 ಕೋವಿಡ್‌ ಪರೀಕ್ಷೆ, ಒಂದು ಸಾವು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 15:41 IST
Last Updated 1 ಅಕ್ಟೋಬರ್ 2020, 15:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ ದಾಖಲೆಯ 1,290 ಕೋವಿಡ್‌ ಪರೀಕ್ಷೆಗಳನ್ನು ಮಾಡಲಾಗಿದ್ದು, 46 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದೆ. 43 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ.

ಗುಂಡ್ಲುಪೇಟೆಯ ನಿವಾಸಿ 65 ವರ್ಷದ ವ್ಯಕ್ತಿ ಸೆ.27ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ನಿಂದಾಗಿ 67 ಮಂದಿ ಹಾಗೂ ಸೋಂಕು ದೃಢಪಟ್ಟಿದ್ದರೂ, ಬೇರೆ ಅನಾರೋಗ್ಯದ ಕಾರಣದಿಂದ 28 ಮಂದಿ ನಿಧನರಾಗಿದ್ದಾರೆ.

ಗುರುವಾರ 46 ಹೊಸ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 4,144 ಪ್ರಕರಣಗಳು ವರದಿಯಾಗಿವೆ. 3,315 ಮಂದಿ ಗುಣಮುಖರಾಗಿದ್ದಾರೆ. 734 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 332 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 39 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಗುರಿ ತಲುಪಿದ ಪರೀಕ್ಷೆ: ಜಿಲ್ಲೆಯಲ್ಲಿ ಪ್ರತಿ ದಿನ 1,200 ಕೋವಿಡ್‌ ಪರೀಕ್ಷೆಗಳನ್ನು ನಡೆಸಲು ಗುರಿ ನೀಡಲಾಗಿದೆ.ಗುರುವಾರ 1,290 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆರ್‌ಟಿಪಿಸಿಆರ್‌ ಮೂಲಕ 942, ರ‍್ಯಾಪಿಡ್ ಆ್ಯಂಟಿಜೆನ್‌ 348 ಪರೀಕ್ಷೆಗಳನ್ನು ನಡೆಸಲಾಗಿದೆ. 1,244 ಮಂದಿಯ ವರದಿ ನೆಗೆಟಿವ್‌ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.