ADVERTISEMENT

ಗುಂಡ್ಲುಪೇಟೆ | ಕಸಾಯಿಖಾನೆಗೆ ಹಸು ಸಾಗಾಟ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 2:00 IST
Last Updated 16 ಸೆಪ್ಟೆಂಬರ್ 2025, 2:00 IST
ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಠಾಣೆಯ ವ್ಯಾಪ್ತಿಯಲ್ಲಿ ಕಸಾಯಿಖಾನೆಗೆ ಸಾಗಣೆ ಮಾಡುತ್ತಿದ್ದ ಹಸುಗಳನ್ನು ವಶಕ್ಕೆ ಪಡೆದಿರುವುದು
ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಠಾಣೆಯ ವ್ಯಾಪ್ತಿಯಲ್ಲಿ ಕಸಾಯಿಖಾನೆಗೆ ಸಾಗಣೆ ಮಾಡುತ್ತಿದ್ದ ಹಸುಗಳನ್ನು ವಶಕ್ಕೆ ಪಡೆದಿರುವುದು   

ಗುಂಡ್ಲುಪೇಟೆ: ತಾಲ್ಲೂಕಿನ ಹಸಗೂಲಿ-ಬೆಟ್ಟದಮಾದಹಳ್ಳಿ ರಸ್ತೆಯಲ್ಲಿ ಕಸಾಯಿಖಾನೆಗೆ ಎರಡು ಹಸುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಬೇಗೂರು ಪೊಲೀಸರು ದಾಳಿ ನಡೆಸಿ ಜಾನುವಾರು ರಕ್ಷಿಸಿ, ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಪಟ್ಟಣದ ನಿವಾಸಿ ಮಕ್ಬುಲ್ ಪಾಷಾ (55) ಮತ್ತು ಮಹಮ್ಮದ್ ಶದಾಬ್ (19) ಬಂಧಿತರು.

‘ಟಾಟಾ ಏಸ್‌ನಲ್ಲಿ ಬೆಟ್ಟದಮಾದಹಳ್ಳಿ, ಕೋಟೆಕೆರೆ, ಹಸಗೂಲಿ ಮಾರ್ಗವಾಗಿ ಗುಂಡ್ಲುಪೇಟೆ ಕಡೆಗೆ ಹಸುಗಳನ್ನು ಸಾಗಿಸುತ್ತಿದ್ದಾಗ ಸಬ್ ಇನ್‌ಸ್ಪೆಕ್ಟರ್‌ ನವೀನ್ ಎಚ್.ಕೆ. ನೇತೃತ್ವದ ತಂಡ ದಾಳಿ ನಡೆಸಿದೆ. ರಕ್ಷಿಸಿದ ಹಸುಗಳನ್ನು ಬರಗಿ ಗೋಶಾಲೆಗೆ ರವಾನೆ ಮಾಡಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಕಾನ್‌ಸ್ಟೆಬಲ್‌ಗಳಾದ ಅಜಿತ್ ಕುಮಾರ್, ಶಿವಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.