
ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ಮೂಲೆಹೊಳೆ ಚೆಕ್‌ಪೋಸ್ಟ್ ಬಳಿ ಆಭರಣ ತಯಾರಕನ ವಾಹನ ಅಡ್ಡಗಟ್ಟಿ ಚಿನ್ನ ದೋಚಲಾಗಿದೆ. ಎರಡು ದಿನದ ಹಿಂದೆ ಘಟನೆ ನಡೆದಿದೆ.
‘ಆಭರಣ ತಯಾರಿಕೆಗೆ ಮಂಡ್ಯದ ಜ್ಯುವೆಲ್ಲರ್ಸ್ ಒಂದರಿಂದ 24 ಕ್ಯಾರೆಟ್‌ನ 800ಗ್ರಾಂ ಚಿನ್ನದ ಗಟ್ಟಿ ಹಾಗೂ 22 ಕ್ಯಾರೆಟ್‌ನ 518 ಗ್ರಾಂ ಚಿನ್ನ ಖರೀದಿಸಿ ತೆರಳುವಾಗ ಕೃತ್ಯ ನಡೆಯಿತು’ ಎಂದು ಕೇರಳದ ಕ್ಯಾಲಿಕಟ್ ನಿವಾಸಿ ವಿನು ) ಎಂಬುವರು ದೂರು ನೀಡಿದ್ದಾರೆ.
‘ಎರಡು ಇನ್ನೋವಾ ಹಾಗೂ ಒಂದು ಇಟಿಯೋಸ್ ವಾಹನದಲ್ಲಿ ಬಂದ 10ರಿಂದ 12 ದರೋಡೆಕೋರರು ಅಡ್ಡಗಟ್ಟಿ ಕಾರು ಸಮೇತ ಅಪಹರಿಸಿದರು. ಮೈಸೂರು–ವಿರಾಜಪೇಟೆ ಜನನಿಬಿಡ ರಸ್ತೆಯಲ್ಲಿ ಕಾರು ನಿಲ್ಲಿಸಿ ಚಿನ್ನದೊಂದಿಗೆ ಪರಾರಿಯಾದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ. ಚಿನ್ನ ತರುವಾಗ ಕಾರಿನಲ್ಲಿ ಚಾಲಕ ಸಮೀರ್, ವಿನು ಇದ್ದರು ಎನ್ನಲಾಗಿದೆ.
ಎಸ್‌ಪಿ ಬಿ.ಟಿ.ಕವಿತಾ ಅವರು ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ‘ಇದು ಪೂರ್ವ ನಿಯೋಜಿತ ಕೃತ್ಯದಂತೆ ಕಾಣುತ್ತಿದೆ. ದಾಖಲೆ ಪರಿಶೀಲನೆ, ತನಿಖೆ ನಡೆದಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.