
ಗುಂಡ್ಲುಪೇಟೆ: ತಾಲ್ಲೂಕಿನ ಹಸಗೂಲಿ ಗ್ರಾಮದಲ್ಲಿ ಪಾರ್ವತಾಂಬೆ ದೇವಾಲಯದ ಮೊದಲ ವರ್ಷದ ಆರಾಧನೆ ಮಹೋತ್ಸವ ಪ್ರಯುಕ್ತ ಹಳ್ಳಿಕಾರ್ ಜೋಡೆತ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಶ್ರೀ ಅಲ್ಲಹಳ್ಳಿ ಪಾರ್ವತಾಂಬೆಗೆ ಸ್ವರ್ಣಕಲ್ಲಿನ ದೇವಾಲಯ ಮತ್ತು ಗ್ರಾಮವನ್ನು ತಳಿರು, ತೋರಣ ಮತ್ತು ವಿದ್ಯುತ್ ದೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ಗ್ರಾಮಸ್ಥರು ಮತ್ತು ದೇವಾಲಯ ಸಮಿತಿಯವರಿಂದ ಪ್ರಸಾದ ವಿನಿಯೋಗ ಮಾಡಿದರು.
ಹಳ್ಳಿಕಾರ್ ಎತ್ತುಗಳ ಪ್ರದರ್ಶನ: ಹಸಗೂಲಿ ಗ್ರಾಮದ ಜಾತ್ರೆ ಮಾಳದಲ್ಲಿ ಬೆಂಗಳೂರಿನ ಶ್ರೀ ಸಚ್ಚಿದಾನಂದ ಸೇವಾ ಟ್ರಸ್ಟ್ ಅಧ್ಯಕ್ಷ ಬಸವರಾಜು ಹಳ್ಳಿಕಾರ್ ಎತ್ತುಗಳ ಪ್ರದರ್ಶನ ಏರ್ಪಡಿಸಿದ್ದರು. ಮೂಡುಗೂರು ಇಮ್ಮಡಿ ಉದ್ದಾನ ಸ್ವಾಮೀಜಿ ಪ್ರದರ್ಶನ ಸಾನಿಧ್ಯ ವಹಿಸಿದ್ದರು.
ಹಳ್ಳಿಕಾರ್ ಜೋಡೆತ್ತುಗಳನ್ನು ವೀಕ್ಷಿಸಿದ ವರ್ತೂರ್ ಸಂತೋಷ್ ನಂತರ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ನಡೆಯುವ ಅನ್ನದಾನಕ್ಕೆ ನಾನು ಸಹಕಾರ ನೀಡುತ್ತೇನೆ ಭರವಸೆ ನೀಡಿದರು.
78 ಜೋಡಿ ಹಳ್ಳಿಕಾರ್ ಎತ್ತುಗಳನ್ನು ಪ್ರದರ್ಶಿಸಲಾಯಿತು. ವಿಜೇತರಾದ ಹಳ್ಳಿಕಾರ್ ಜೋಡೆತ್ತುಗಳ ಮಾಲೀಕರಿಗೆ ಪ್ರಥಮ ₹20 ಸಾವಿರ, ದ್ವಿತೀಯ ₹15 ಸಾವಿರ ಮತ್ತು ತೃತೀಯ ₹10 ಸಾವಿರ ನಗದು ಬಹುಮಾನ ಮತ್ತು ಸಮಾಧಾನಕರ ಬಹುಮಾನ ನೀಡ ಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.