
ಹನೂರು: ಪಟ್ಟಣದಲ್ಲಿ ಮಾ.9 ರಂದು ಆರಂಭವಾಗುವ ಬೆಟ್ಟಳ್ಳಿ ಮಾರಮ್ಮನ ಹಬ್ಬವನ್ನು ಬಹಿಷ್ಕರಿಸುವ ಸಂಬಂಧ ಪಟ್ಟಣದ ಬಲಗೈ ಸಮುದಾಯದ ಜನರು ಸೋಮವಾರ ನಡೆದ ಸಭೆಯಲ್ಲಿ ನಿರ್ಧರಿಸಿದರು.
ಎಲ್ಲಾ ಸಮುದಾಯದವರು ಸೇರಿ ಆಚರಿಸಲಾಗುತ್ತಿದ್ದ ಬೆಟ್ಟಳ್ಳಿ ಮಾರಮ್ಮನ ಹಬ್ಬದಲ್ಲಿ ಈ ಬಾರಿ ನಾವು ಸೇರುವುದಿಲ್ಲ. ದೇವಾಲಯದ ಉಸ್ತುವಾರಿ ಒಕ್ಕಲಿಗರು ಯಾವುದೇ ಕಾರ್ಯಕ್ರಮ, ನಿರ್ಣಯಗಳ ಬಗ್ಗೆ ಬೇರೆ ಸಮುದಾಯಗಳೊಂದಿಗೆ ಮಾಹಿತಿ ಹಂಚಿಕೊಳ್ಳುವುದಿಲ್ಲ. ಹುಂಡಿಹಣ,ಕಾಣಿಕೆಗಳ ಬಗ್ಗೆ ಮಾಹಿತಿ ನೀಡದೆ , ಬಲಗೈ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ಬಾಯಿಬೀಗ ಮತ್ತು ತಂಪಿನ ಸೇವೆಗೆ ನಿರ್ಬಂಧ: ಪಟ್ಟಣದ ಕೆಲವು ಸಮುದಾಯದವರು ಮಾತ್ರ ತಂಪಿನ ಸೇವೆ ಸಲ್ಲಿಸುವರು. ದಲಿತ ಸೇರಿದಂತೆ, ಕೆಲವು ಸಮುದಾಯದವರನ್ನು ಸಾಂಪ್ರದಾಯಕವಾಗಿ ನಿರ್ಬಂಧಿಸಲಾಗಿದೆ. ಈ ಸಮುದಾಯದ ಜನರು ಅಕ್ಕಿ,ಬೆಲ್ಲ,ನೀಡಿ ತೃಪ್ತಿ ಪಡಬೇಕಾ ಎಂದು ಮುಖಂಡರು ಪ್ರಶ್ನಿಸಿದರು. ಇನ್ನು ಮುಂದೆ ಹಬ್ಬವನ್ನು ಆಚರಿಸಲಾಗುವುದಿಲ್ಲ ಎಂದು ಬಲಗೈ ಸಮುದಾಯದವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.