ADVERTISEMENT

ಹೃದಯಾಘಾತ: ಬಸ್‌ ನಿರ್ವಾಹಕ ಸಾವು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2018, 15:20 IST
Last Updated 24 ಸೆಪ್ಟೆಂಬರ್ 2018, 15:20 IST

ಚಾಮರಾಜನಗರ: ಕರ್ತವ್ಯದಲ್ಲಿದ್ದ ಬಸ್‌ ನಿರ್ವಾಹಕರೊಬ್ಬರುಸೋಮವಾರ ಮುಂಜಾನೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ವಿಜಯಪುರದ ಹೀರಾಗೋಪಾಲ್‌ ರಾಥೋಡ್‌ (36) ಮೃತರು.

ರಾಥೋಡ್‌ ಅವರು ಬೆಳಿಗ್ಗೆ 6 ಗಂಟೆಗೆ ಗುಂಡ್ಲುಪೇಟೆಗೆ ಹೋಗುವ ಬಸ್‌ನ ನಿರ್ವಾಹಕರಾಗಿದ್ದರು. 5.45ಕ್ಕೆ ಬಸ್‌ಗೆ ಬಂದು ಕರ್ತವ್ಯಕ್ಕೆ ಸಿದ್ಧರಾಗುತ್ತಿದ್ದಾಗ ಹಠಾತ್‌ ಆಗಿ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಸಹೋದ್ಯೋಗಿಗಳು ಸಾರ್ವಜನಿಕ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದರು. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.