ADVERTISEMENT

ಹೊಗೆನಕಲ್ ಅಭಿವೃದ್ದಿಗೆ ಕ್ರಮವಹಿಸಿ: ಶಾಸಕ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 16:06 IST
Last Updated 24 ನವೆಂಬರ್ 2024, 16:06 IST
ಹೊಗೇನಕಲ್‌ ಜಲಪಾತವನ್ನು ಶಾಸಕ ಎಂ.ಆರ್. ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಶಿಲ್ಪನಾಗ್ ವೀಕ್ಷಣೆ ಮಾಡಿದರು
ಹೊಗೇನಕಲ್‌ ಜಲಪಾತವನ್ನು ಶಾಸಕ ಎಂ.ಆರ್. ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಶಿಲ್ಪನಾಗ್ ವೀಕ್ಷಣೆ ಮಾಡಿದರು    

ಮಹದೆಶ್ವರ ಬೆಟ್ಟ: ಗಡಿಭಾಗದ ಹೊಗೇನಕಲ್ ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳು ಯೋಜನೆ ಸಿದ್ಧಪಡಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.

ಹೊಗೇನಕಲ್ ಪ್ರವಾಸಿ ತಾಣಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಭೇಟಿ ನೀಡಿದ ಸಂದರ್ಭ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿ ಶಾಸಕ ಮಾತನಾಡಿದರು.  ಅಭಿವೃದ್ಧಿಪಡಿಸಿದರೆ ಮಾತ್ರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ವ್ಯಾಪಾರ ವಹಿವಾಟಿಗೆ ಅನುಕೂಲ ಕಲ್ಪಿಸಬೇಕು, ಪ್ರವಾಸಿಗರಿಗೆ  ಶೌಚಾಲಯ ಹಾಗೂ ಸ್ನಾನ ಗೃಹ, ಬಟ್ಟೆ ಬದಲಿಸುವ ಕೊಠಡಿ  ಸೌಲಭ್ಯ ಕಲ್ಪಿಸಬೇಕು ಎಂದರು. ತಮಿಳುನಾಡಿನ ಭಾಗಕ್ಕೆ ತೆರಳಿದ ಶಾಸಕ ಹಾಗೂ ಜಿಲ್ಲಾಧಿಕಾರಿ ವಾಹನಗಳ ನಿಲುಗಡೆ ಸೇರಿದಂತೆ ಪ್ರವಾಸಿಗರಿಗೆ ಊಟ ಮತ್ತು ವಸತಿ ಸೌಕರ್ಯಗಳಿವೆ,  ಹೆಚ್ಚು ಪ್ರವಾಸಿಗರು ಬರುತ್ತಿದ್ದು  ಅಲ್ಲಿನ ಸರ್ಕಾರಕ್ಕೆ ಆದಾಯ ಲಭಿಸುತ್ತಿದೆ. ಜಲಪಾತ ವೀಕ್ಷಣೆ ಜಾಗ, ಅಣೆ ಕಟ್ಟೆ ನಿರ್ಮಾಣ, ವಾಹನ ನಿಲುಗಡೆ, ಊಟ ವಸತಿಗೆ ಅಥಿತಿ ಗೃಹ ನಿರ್ಮಿಸಬೇಕು ಎಂದು  ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪೊಲೀಸ್ ಎಸ್‌ಪಿ ಕವಿತಾ, ಡಿಎಫ್‌ಒ ಸಂತೋಷ್ ಕುಮಾರ್,ಉಪ ವಿಭಾಗ ಅಧಿಕಾರಿ ಮಹೇಶ್, ಡಿಎಸ್‌ಪಿ ಧರ್ಮೇಂದ್ರ, ಡಿಡಿ ತಮನ್ ಪಾಟೀಲ್, ತಮಿಳು ನಾಡು ಪ್ರವಾಸೋದ್ಯಮ ಅಧಿಕಾರಿ ಕದಿರೇಶ್, ತಹಶೀಲ್ದಾರ್ ಗುರುಪ್ರಸಾದ್ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.