
ಪ್ರಾತಿನಿಧಿಕ ಚಿತ್ರ
ಕೊಳ್ಳೇಗಾಲ: ತಾಲ್ಲೂಕಿನ ಕಾಮಗೆರೆ ಗ್ರಾಮದ ನಿವಾಸಿ ಲೋಕೇಶ್ ಪಾನಮತ್ತನಾಗಿ ಮತ್ತಿನಲ್ಲಿ ಕತ್ತು ಕೊಯ್ದುಕೊಂಡಿದ್ದು, ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೆಂಡತಿಯ ಜೊತೆ ಜಗಳವಾಡಿ ಅವರು ಕೊಂಡು ಕತ್ತು ಕೊಯ್ದುಕೊಂಡಿದ್ದರು. ಮಧುವನಹಳ್ಳಿ ಗ್ರಾಮ ನಿವಾಸಿ ಲೋಕೇಶ್ ಪತ್ನಿ, ಇಬ್ಬರು ಮಕ್ಕಳೊಂದಿಗೆ ಹೆಂಡತಿಮನೆ ಕಾಮಗೆರೆಯಲ್ಲಿ ವಾಸವಾಗಿದ್ದು, ಮದ್ಯ ವ್ಯಸನಿಯಾಗಿದ್ದು ದಿನನಿತ್ಯ ಹೆಂಡತಿಯ ಜೊತೆ ಜಗಳವಾಡಿ ಚಿತ್ರ ಹಿಂಸೆ ನೀಡುತ್ತಿದ್ದು. ಸಹಿಸಲಾಗದ ಹೆಂಡತಿ 112 ವಾಹನದ ಪೊಲೀಸರಿಗೆ ಕರೆ ಮಾಡಿದ್ದರು. ಎಎಸ್ಐ ರಂಗರಾಜ್ ಸಿಬ್ಬಂದಿ ಮೊಹಮ್ಮದ್ ಜಾಫರ್ ಸ್ಥಳಕಾಗಮಿಸಿದ ಲೋಕೇಶ್‌ಗೆ ಬುದ್ಧಿ ಹೇಳಿ ಸಮಾಧಾನ ಪಡಿಸಿದ್ದರು.
ಬಳಿ, ‘ಮಧುವನಹಳ್ಳಿ ಗ್ರಾಮಕ್ಕೆ ಹೋಗುತ್ತೇನೆ ಎಂದು ರಸ್ತೆಗೆ ಬಂದು ಬ್ಲೇಡಿನಿಂದ ಕತ್ತನ್ನು ಕೊಯ್ದುಕೊಂಡಿದ್ದನು. ತೀವ್ರ ರಕ್ತಸ್ರಾವವಾಗಿ ಒದ್ದಾಡುತ್ತಿದ್ದನ್ನು ಗಮನಿಸಿದ ಗಸ್ತು ಪೊಲೀಸರು ತಕ್ಷಣ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ವೈದ್ಯರುಆಸ್ಪತ್ರೆಯಲ್ಲಿ ದಾಖಲು ಚಿಕಿತ್ಸೆ ನೀಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.