
ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದ ಕಬಿನಿ ನಾಲೆಯ ಬಳಿ ಜಿಂಕೆ ಮಾಂಸವನ್ನು ಹಂಚಿಕೊಳ್ಳುತ್ತಿದ್ದ ಗುಂಪಿನ ಮೇಲೆ ಅರಣ್ಯ ಸಂಚಾರಿ ದಳದ ಪೊಲೀಸರು ಬುಧವಾರ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದರು. ಆರು ಮಂದಿ ಪರಾರಿಯಾದರು.
ಗ್ರಾಮದ ಮಹದೇವ ಹಾಗೂ ಕಿರಣ್ ಬಂಧಿತರು. ಅವರಿಂದ 43 ಕೆ.ಜಿ ಮಾಂಸ, ಜಿಂಕೆ ತಲೆ, ಐದು ಕಾಲುಗಳು, ಮಾಂಸವನ್ನು ಕತ್ತರಿಸಲು ಬಳಸಿದ ಮಚ್ಚು, 4 ಚೂರಿ ಹಾಗೂ ಮೂರು ಬೈಕ್‌ಗಳನ್ನು ವಶಪಡಿಸಿಕೊಂಡರು.
ಹೆಡ್ ಕಾನ್‌ಸ್ಟೆಬಲ್ ಸ್ವಾಮಿ, ಬಸವರಾಜು, ರಾಮಚಂದ್ರ, ಜಮೀಲ್, ಲತಾ, ಕಾನ್‌ಸ್ಟೆಬಲ್ ಬಸವರಾಜು, ಚಾಲಕ ಪ್ರಭಾಕರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.