
ಪ್ರಜಾವಾಣಿ ವಾರ್ತೆಕೊಳ್ಳೇಗಾಲ: ಆನ್‌ಲೈನ್ ವಂಚಕರಿಂದ ಯುವತಿಯೊಬ್ಬರು ಹಣ ಕಳೆದುಕೊಂಡು ನಗರ ಪೊಲೀಸ್ ಠಾಣೆಗೆ ಗುರುವಾರ ದೂರು ನೀಡಿದ್ದಾರೆ.
ಇಲ್ಲಿನ ದೇವಾಂಗಪೇಟೆಯ ನಿವಾಸಿ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಉದ್ಯೋಗಿಯಾಗಿರುವ ಭೂಮಿಕಾ ಹಣ ಕಳೆದುಕೊಂಡವರು. ಪೋನ್‌ಗೆ ಬಂದಿದ್ದ ಸ್ಟಾಕ್ ಎಕ್ಸ್‌ಚೇಂಜ್ ಮಾರ್ಕೆಟ್ ಎಂಬ ಲಿಂಕ್ ಅನ್ನು ಇವರು ಕ್ಲಿಕ್ ಮಾಡಿದ್ದರು. ಆಗ, ‘ ₹91 ಸಾವಿರ ನೀಡಿದರೆ, ₹1.30 ಲಕ್ಷ ನೀಡುವುದಾಗಿ ಆಸೆ ತೋರಿಸಿ ಮೋಸ ಎಸಗಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.