
ಪ್ರಜಾವಾಣಿ ವಾರ್ತೆ
ಕೊಳ್ಳೇಗಾಲ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಲ್ಲಿನ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ 25 ಕೆ.ಜಿ ಬೆಣ್ಣೆಯಿಂದ ಅಲಂಕಾರ ಮಾಡಲಾಗಿತ್ತು.
ನಗರದ ಕಾವೇರಿ ರಸ್ತೆಯಲ್ಲಿರುವ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆಯಿಂದ ಸುಪ್ರಭಾತ ಸೇವೆ, ಅಭಿಷೇಕ ಹಾಗೂ ಅರ್ಚನೆ, ಮಂತ್ರ ಪುಷ್ಪ ಉಪಚಾರ ನಡೆಸಿ ಬೆಣ್ಣೆ ಅಲಂಕಾರ ಮಾಡಿದರು.
ದೇವಸ್ಥಾನಕ್ಕೆ ಬಂದಂತಹ ಭಕ್ತರಿಗೆ ಮಹಾಮಂಗಳಾರತಿ ಹಾಗೂ ಪ್ರಸಾದ ನೀಡಿದರು. ಹಬ್ಬದ ಹಿನ್ನೆಲೆ ಸಾವಿರಾರು ಭಕ್ತರು ದರ್ಶನ ಪಡೆದರು.
ಸಂಜೆ ಉತ್ತರಾಯಣ ಪುಣ್ಯಕಾಲದಿಂದಾಗಿ ವೈಕುಂಠದ್ವಾರ (ಸ್ವರ್ಗದ ಬಾಗಿಲ)ದಿಂದ ಉತ್ಸವಮೂರ್ತಿಯನ್ನು ರಾಜಬೀದಿಯಲ್ಲಿ ಮೆರವಣಿಗೆ ನಡೆಸಿದರು. ಭಕ್ತರು ವೈಕುಂಠ ದ್ವಾರದಿಂದ ಹೊರನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.