ADVERTISEMENT

ಗುಂಡ್ಲುಪೇಟೆ ತಾಲ್ಲೂಕಿನ ರಂಗೂಪುರದಲ್ಲಿ ಚಿರತೆ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 19:49 IST
Last Updated 1 ಮಾರ್ಚ್ 2026, 19:49 IST
<div class="paragraphs"><p>ಚಿರತೆಯ ಮೃತದೇಹಗ</p></div>

ಚಿರತೆಯ ಮೃತದೇಹಗ

   

ಗುಂಡ್ಲುಪೇಟೆ: ತಾಲ್ಲೂಕಿನ ರಂಗೂಪುರ ಗ್ರಾಮದ ಹೊರ ವಲಯದ ಗುಡ್ಡದ ಸಮೀಪ ಮಹದೇವಪ್ಪ ಎಂಬುವರ ಜಮೀನಿನ ಬಳಿ ಚಿರತೆ ಚಿರತೆ ಮೃತದೇಹ ಪತ್ತೆಯಾಗಿದ್ದು, ಗ್ರಾಮಸ್ಥರು ಮಾಹಿತಿ ನೀಡಿದ್ದರು.

‘ಚಿರತೆ ಒಂದರಿಂದ ಎರಡು ವರ್ಷ ಪ್ರಾಯದ್ದಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ‘ಮುಳ್ಳು ಹಂದಿಯನ್ನು ತಿನ್ನುವ ಪ್ರಯತ್ನದಲ್ಲಿ ಆಗಿರುವ ಗಾಯಗಳಿಂದ ಮೃತಪಟ್ಟಿರಬಹುದು’ ಎಂದು ಅಂದಾಜಿಸಲಾಗಿದೆ.

ADVERTISEMENT

ಗುಂಡ್ಲುಪೇಟೆ ಪಶು ವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ನಡೆಸಿ, ಪ್ರಯೋಗಾಲಯಕ್ಕೆ ಕಳುಹಿಸಲು ಮಾದರಿ ಸಂಗ್ರಹಿಸಿದರು. ಅದರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದೇ ಸ್ಥಳದಲ್ಲಿ ಕರಡಿ ಸೆರೆಗೆ ಬೋನ್ ಇರಿಸಲಾಗಿದೆ. ಪಕ್ಕದಲ್ಲೇ ಚಿರತೆ ಮೃತಪಟ್ಟಿದೆ’ ಎಂದು ಓಂಕಾರ ವಲಯಾರಣ್ಯಾಧಿಕಾರಿ ಹನುಮಂತಪ್ಪ ಪಾಟೀಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.