
ಯಳಂದೂರು ತಾಲ್ಲೂಕಿನ ಕೆಸ್ತೂರು ಹೊರ ವಲಯದಲ್ಲಿ ಮಂಗಳವಾರ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು ಹೆಚ್ಚಿಸಿದ್ದಾರೆ
ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಹೊರವಲಯದ ಚೆನ್ನಯ್ಯನ ಕಟ್ಟೆ ಬಳಿ ಮಂಗಳವಾರ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದು. ಕೃಷಿಕರಲ್ಲಿ ಆತಂಕ ಮೂಡಿಸಿದೆ.
ಗ್ರಾಮಸ್ಥರು ಹೆಜ್ಜೆ ಗುರುತು ಪರಿಶೀಲಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಗಸ್ತು ಪಡೆ ಚಿರತೆ ಚಲನವಲನಗಳ ಮೇಲೆ ಕಣ್ಣಿಟ್ಟಿದೆ.
‘ಇಲ್ಲಿನ ಪ್ರದೇಶದಲ್ಲಿ ಚಿರತೆಯ ಹೆಜ್ಜೆ ಗುರುತು ಮೂಡಿದೆ. ಹಾಗಾಗಿ, ರೈತರು ಜಮೀನುಗಳಿಗೆ ರಾತ್ರಿ ವೇಳೆ ಸಂಚರಿಸಬಾರದು. ಚಿರತೆ ಸಂಚರಿಸುವುದು ಕಂಡುಬಂದರೆ ಆತಂಕಕ್ಕೆ ಒಳಗಾಗದೆ ಮಾಹಿತಿ ನೀಡಬಹುದು’ ಎಂದು ಉಪ ವಲಯ ಅರಣ್ಯಾಧಿಕಾರಿ ಲಕ್ಷ್ಮಣ್ ಹೇಳಿದರು.
ಅರಣ್ಯ ಅಧಿಕಾರಿಗಳಾದ ಡಿ.ಕೆ.ಮಧು, ವೀಕ್ಷಕ ಚಂದ್ರಶೇಖರ್, ಗಸ್ತು ಪಡೆಯ ಪ್ರಭುಸ್ವಾಮಿ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.