
ಚಿರತೆ ಸೆರೆ ಹಿಡಿಯಲು ಇರಿಸಿದ್ದ ಬೋನಿನೊಳಗೆ ವ್ಯಕ್ತಿಯೊಬ್ಬರು ಸಿಲುಕಿರುವ ದೃಶ್ಯ
ಚಾಮರಾಜನಗರ: ತಾಲ್ಲೂಕಿನ ಗಂಗವಾಡಿ ಗ್ರಾಮದಲ್ಲಿ ಚಿರತೆ ಸೆರೆ ಹಿಡಿಯಲು ಇರಿಸಿದ್ದ ಬೋನಿನೊಳಗೆ ವ್ಯಕ್ತಿಯೊಬ್ಬರು ಸಿಲುಕಿ ಮೂರು ತಾಸು ಪರಿತಪಿಸಿದ ಪ್ರಸಂಗ ಮಂಗಳವಾರ ನಡೆದಿದೆ.
ಗಂಗವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ರುದ್ರ ಅವರ ಜಮೀನಿನಲ್ಲಿ ಆಟೋಮ್ಯಾಟಿಕ್ ಲಾಕ್ ಹೊಂದಿರುವ ಬೋನು ಇರಿಸಿದ್ದರು. ಇದೇ ದಾರಿಯಲ್ಲಿ ಸಾಗುತ್ತಿದ್ದ ಕಿಟ್ಟಿ ಎಂಬುವರು ಕುತೂಹಲಕ್ಕಾಗಿ ಬೋನಿನೊಳಗೆ ಪ್ರವೇಶಿಸಿದ್ದು ಕೂಡಲೇ ಏಕಾಏಕಿ ಬಾಗಿಲು ಬಂದ್ ಆಗಿದೆ.
ನಿರ್ಜನ ಪ್ರದೇಶವಾಗಿದ್ದರಿಂದ ಕೂಗಿಕೊಂಡರೂ ತಕ್ಷಣಕ್ಕೆ ಯಾರೂ ಸಹಾಯಕ್ಕೆ ಬಂದಿಲ್ಲ. ಬಾಗಿಲು ತೆರೆಯಲು ನಡೆಸಿದ ಪ್ರಯತ್ನಗಳು ವಿಫಲವಾಗಿ ಮೂರು ತಾಸು ಬೋನಿನೊಳಗೆ ಬಂಧಿಯಾಗಿದ್ದಾರೆ. ನಂತರ ಅಕ್ಕಪಕ್ಕದ ಜಮೀನಿನ ರೈತರು ಬಂದು ಬೋನಿನಿಂದ ಬಂಧಮುಕ್ತಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.