ಸಂತೇಮರಹಳ್ಳಿ: ಸಮೀಪದ ಕುದೇರು ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಹಿಡಲಾಗಿದ್ದ ಬೋನಿಗೆ ಶನಿವಾರ ಚಿರತೆ ಬಿದ್ದಿದೆ.
ಕುದೇರು, ತೊರವಳ್ಳಿ, ಬಡಗಮೋಳೆ, ತೆಂಕಲಮೋಳೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ 2 ವಾರದ ಹಿಂದೆ ಚಿರತೆ ರೈತರ ಜಮೀನಿನಲ್ಲಿ ತಿರುಗಾಡಿರುವುದರ ಹೆಜ್ಜೆ ಗುರುತು ಕಾಣಿಸಿಕೊಂಡಿತ್ತು. ಕುದೇರು ಗ್ರಾಮದ ಬವವರಾಜು ಎಂಬುವರ ಜಮೀನಿನಲ್ಲಿ ಸಾಕಿದ ನಾಯಿ ಹಾಗೂ ತೊರವಳ್ಳಿ, ತೆಂಕಲಮೋಳೆ, ಬಡಗಲಮೋಳೆ ಗ್ರಾಮಗಳ ಜನರು ಆಡು, ಕುರಿಗಳನ್ನು ಮೇಯಿಸಲು ಬಿಟ್ಟ ವೇಳೆಯಲ್ಲಿ ಚಿರತೆ ದಾಳಿ ನಡೆಸಿತ್ತು.
ಈ ಹಿನ್ನೆಲೆಯಲ್ಲಿ ಕುದೇರು ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಚಾಮರಾಜನಗರ ಅರಣ್ಯ ಇಲಾಖೆ ವತಿಯಿಂದ ಬೋನ್ ಹಾಕಲಾಗಿತ್ತು.
ಈ ಹಿನ್ನೆಲೆಯಲ್ಲಿ ಶನಿವಾರ ಬೋನಿಗೆ ಚಿರತೆ ಬಿದ್ದಿದೆ. ಸ್ಥಳಕ್ಕೆ ಚಾಮರಾಜನಗರದ ಡಿಆರ್‌ಎಫ್ ಚಂದ್ರಕುಮಾರ್, ಗೌರಿಶಂಕರ್, ಅರಣ್ಯ ರಕ್ಷಕರಾದ ಪೃಥ್ವಿರಾಜು ಸಿಬ್ಬಂದಿ ಮಹೇಶ್, ರೇವಣ್ಣ ಸ್ಥಳಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.