ADVERTISEMENT

ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಹಾದೇವ ಶಂಕನಪುರ ಸರ್ವಾಧ್ಯಕ್ಷ

ಫೆ.8, 9ರಂದು ಕೊಳ್ಳೇಗಾಲದಲ್ಲಿ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 16:20 IST
Last Updated 19 ಜನವರಿ 2023, 16:20 IST
ಎಂ.ಶೈಲಕುಮಾರ್‌
ಎಂ.ಶೈಲಕುಮಾರ್‌   

ಚಾಮರಾಜನಗರ: ಕೊಳ್ಳೇಗಾಲದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಫೆ.8, 9ರಂದು ನಡೆಯಲಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಾನಪದ ವಿದ್ವಾಂಸ, ಸಾಹಿತಿ ಮಹಾದೇವ ಶಂಕನಪುರ ಆಯ್ಕೆ ಯಾಗಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಶೈಲಕುಮಾರ್‌ ಈ ಬಗ್ಗೆ ಮಾಹಿತಿ ನೀಡಿದರು.

‘ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆ ಸೇರಿ ಸಮ್ಮೇಳನದ ಅಧ್ಯಕ್ಷರ ಹೆಸರನ್ನು ಅಂತಿಮಗೊಳಿಸಿದ್ದು, ಮಹಾ ದೇವ ಶಂಕನಪುರ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದರು.

ADVERTISEMENT

ಬೆಳ್ಳಿಯ ಬೆಳಕಲ್ಲಿ ನುಡಿ ಜಾತ್ರೆ: ‘ಕೋವಿಡ್‌ ಸೇರಿದಂತೆ ಇತರ ಕಾರಣ ಗಳಿಂದ 2 ವರ್ಷಗಳಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿ ರಲಿಲ್ಲ. ಈ ವರ್ಷ ಜಿಲ್ಲೆ ಬೆಳ್ಳಿ ಹಬ್ಬ ಆಚರಿಸಿ ಕೊಳ್ಳುತ್ತಿದೆ. ಅದರ ಸವಿ ನೆನಪಿನಲ್ಲಿ ‘ಬೆಳ್ಳಿಯ ಬೆಳಕಲ್ಲಿ ನುಡಿ ಜಾತ್ರೆ’ ಎಂಬ ಅಡಿ ಬರಹದೊಂದಿಗೆ ಈ ಬಾರಿ ಸಮ್ಮೇಳನ ನಡೆಯಲಿದೆ’ ಎಂದು ಹೇಳಿದರು.

ಮೂರನೇ ಸಮ್ಮೇಳನ: ‘ಕೊಳ್ಳೇಗಾಲ ದಲ್ಲಿ ನಡೆಯುತ್ತಿರುವ ಮೂರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಇದು.
ನಾಗಮಲ್ಲಪ್ಪ ಜಿಲ್ಲಾ ಕಸಾಪ ಅಧ್ಯಕ್ಷ ರಾಗಿದ್ದಾಗ, 2ನೇ ಸಾಹಿತ್ಯ ಸಮ್ಮೇಳನ ಕೊಳ್ಳೇಗಾಲದಲ್ಲಿ ನಡೆದಿತ್ತು. ಮೂಡ್ನಾ ಕೂಡು ಚಿನ್ನಸ್ವಾಮಿ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ನಂತರ 6ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವೂ ಕೊಳ್ಳೇಗಾಲದಲ್ಲೇ ನಡೆದಿತ್ತು. ಆಗ ಸೋಮಶೇಖರ ಬಿಸಲವಾಡಿ ಕಸಾಪ ಅಧ್ಯಕ್ಷರಾಗಿದ್ದರೆ, ಕುಮಾರ ನಿಜಗುಣ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು’ ಎಂದರು.

‘ಜಾನಪದ ಗೋಷ್ಠಿ, 25 ವರ್ಷಗಳಲ್ಲಿ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಿಲ್ಲೆ ನಡೆದು ಬಂದ ಹಾದಿ, ಮಾಧ್ಯಮ ಬೆಳೆದು ಬಂದ ಹಾದಿಯ ಬಗ್ಗೆ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಗೌರವ ಅಧ್ಯಕ್ಷ ಮಹಾಲಿಂಗ ಗಿರ್ಗಿ, ಕೋಶಾಧ್ಯಕ್ಷ ನಿರಂಜನಕುಮಾರ್‌, ಕೊಳ್ಳೇಗಾಲ ತಾಲ್ಲೂಕು ಕಸಾಪ ಅಧ್ಯಕ್ಷ ಎಸ್‌.ನಾಗರಾಜು, ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಅರಕಲವಾಡಿ ನಾಗೇಂದ್ರ ಇದ್ದರು.

ಜಾನಪದ ಸಂಶೋಧಕ, ಸಾಹಿತಿ...

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಮಹಾದೇವ ಶಂಕನಪುರ ‘ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿ ರುವುದಕ್ಕೆ ಖುಷಿಯಾಗಿದೆ. ಸಾಹಿತ್ಯ, ಸಂಸ್ಕೃತಿ, ಚರಿತ್ರೆ ಮತ್ತು ಆಧ್ಯಾತ್ಮಿಕತೆ... ಈ ಎಲ್ಲವನ್ನೂ ಒಳಗೊಂಡಿರುವ ಜಿಲ್ಲೆಯ ಅಸ್ಮಿತೆಯನ್ನು ಪ್ರತಿ ನಿಧಿಸುವ ಸ್ಥಾನ. ನಮ್ಮ ಜಿಲ್ಲೆಯ ಸಂಸ್ಕೃತಿ, ಜಾನಪದದ ಆಗು ಹೋಗುಗಳ ಬಗ್ಗೆ ಲೇಖನಗಳು, ಪುಸ್ತಕಗಳ ಮೂಲಕ ಸದಾ ಎಚ್ಚರ ಕಾಪಾಡಿಕೊಂಡು ಬಂದಿದ್ದೇನೆ. ಇಂದು ನಾನು ಈ ಮಟ್ಟಕ್ಕೆ ತಲುಪಿದ್ದೇನೆ ಎಂಬ ಸಂಭ್ರಮ ಇದೆ’ ಎಂದರು.

‘ನಮ್ಮ ಮಲೆ ಮಹದೇಶ್ವರ, ಮಂಟೇಸ್ವಾಮಿ ಕಾವ್ಯಗಳ ಆಶಯದಂತೆ ಜಾತಿ, ಧರ್ಮ, ಸಂಸ್ಕೃತಿಗಳ ನಡುವೆ ಸಾಮರಸ್ಯ ಸಹಿಷ್ಣುತೆ ಕಾಪಾಡುವ ವಿಚಾರಗಳು ಸಮ್ಮೇಳನದಲ್ಲಿ ಚರ್ಚೆಯಾಗಬೇಕು ಎಂಬ ಆಶಯ ನನ್ನದು. ಎರಡು ದಿನ ನಡೆಯುವ ನುಡಿ ಜಾತ್ರೆಯ ಯಶಸ್ಸಿಗೆ ಜಿಲ್ಲೆಯ ಕನ್ನಡದ ಮನಸುಗಳು ಕೈಜೋಡಿಸಬೇಕು’ ಎಂದು ಹೇಳಿದರು.

‘ಜಿಲ್ಲೆಯ ಅಸ್ಮಿತೆ ಪ್ರತಿನಿಧಿಸುವ ಸ್ಥಾನ’

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಮಹಾದೇವ ಶಂಕನಪುರ ‘ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಖುಷಿಯಾಗಿದೆ. ಇದೊಂದು ಜವಾಬ್ದಾರಿಯುತ ಸ್ಥಾನ. ಸಾಹಿತ್ಯ, ಸಂಸ್ಕೃತಿ, ಚರಿತ್ರೆ ಮತ್ತು ಆಧ್ಯಾತ್ಮಿಕತೆ... ಈ ಎಲ್ಲವನ್ನೂ ಒಳಗೊಂಡಿರುವ ಜಿಲ್ಲೆಯ ಅಸ್ಮಿತೆಯನ್ನು ಪ್ರತಿನಿಧಿಸುವ ಸ್ಥಾನ. ನಮ್ಮ ಜಿಲ್ಲೆಯ ಸಂಸ್ಕೃತಿ, ಜಾನಪದದ ಆಗು ಹೋಗುಗಳ ಬಗ್ಗೆ ಲೇಖನಗಳು, ಪುಸ್ತಕಗಳ ಮೂಲಕ ಸದಾ ಎಚ್ಚರ ಕಾಪಾಡಿಕೊಂಡು ಬಂದಿದ್ದೇನೆ. ಇಂದು ನಾನು ಈ ಮಟ್ಟಕ್ಕೆ ತಲುಪಿದ್ದೇನೆ ಎಂಬ ಸಂಭ್ರಮ ಇದೆ’ ಎಂದರು.

‘ನಮ್ಮ ಮಲೆ ಮಹದೇಶ್ವರ, ಮಂಟೇಸ್ವಾಮಿ ಕಾವ್ಯಗಳ ಆಶಯದಂತೆ ಜಾತಿ, ಧರ್ಮ, ಸಂಸ್ಕೃತಿಗಳ ನಡುವೆ ಸಾಮರಸ್ಯ ಸಹಿಷ್ಣುತೆ ಕಾಪಾಡುವ ವಿಚಾರಗಳು ಸಮ್ಮೇಳನದಲ್ಲಿ ಚರ್ಚೆಯಾಗಬೇಕು ಎಂಬ ಆಶಯ ನನ್ನದು. ಎರಡು ದಿನ ನಡೆಯುವ ನುಡಿ ಜಾತ್ರೆಯ ಯಶಸ್ಸಿಗೆ ಜಿಲ್ಲೆಯ ಕನ್ನಡದ ಮನಸುಗಳು ಕೈಜೋಡಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.