ADVERTISEMENT

ಕೊಳ್ಳೇಗಾಲ: ಶಿವರಾತ್ರಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 12:58 IST
Last Updated 27 ಫೆಬ್ರುವರಿ 2025, 12:58 IST
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕೊಳ್ಳೇಗಾಲದ ಶಿವರಾವಳೇಶ್ವರ ಸ್ವಾಮಿ ಮತ್ತು ರಾಕಾಸಾಮ್ಮ ದೇವಿ ಹಾಗೂ ಮಹಾಗಣಪತಿ ದೇವಸ್ಥಾನದಲ್ಲಿ ಗುರುವಾರ ವಿಶೇಷ ಪೂಜೆ ನಡೆಯಿತು
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕೊಳ್ಳೇಗಾಲದ ಶಿವರಾವಳೇಶ್ವರ ಸ್ವಾಮಿ ಮತ್ತು ರಾಕಾಸಾಮ್ಮ ದೇವಿ ಹಾಗೂ ಮಹಾಗಣಪತಿ ದೇವಸ್ಥಾನದಲ್ಲಿ ಗುರುವಾರ ವಿಶೇಷ ಪೂಜೆ ನಡೆಯಿತು   

ಕೊಳ್ಳೇಗಾಲ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶಿವರಾವಳೇಶ್ವರ ಸ್ವಾಮಿ ಮತ್ತು ರಾಕಾಸಾಮ್ಮ ದೇವಿ ಹಾಗೂ ಮಹಾಗಣಪತಿ ದೇವಸ್ಥಾನದಲ್ಲಿ ಗುರುವಾರ ತಂಪು ಸೇವೆ ನಡೆಯಿತು.

ನಗರದ ಹೊರವಲಯದ ಮುಳ್ಳೂರು ರಸ್ತೆಯಲ್ಲಿರುವ ದೇವಸ್ಥಾನದಲ್ಲಿ ಶಿವರಾವಳೇಶ್ವರ ಸ್ವಾಮಿ, ರಾಕಾಸಮ್ಮದೇವಿ, ಗಣಪತಿಸ್ವಾಮಿಗೆ ತೋಮಾಲೆ, ಸೇವೆ ಮಾಡುವ ಮೂಲಕ ವಿಶೇಷ ಪೂಜೆ ನಡೆಯಿತು.

ಶಿವರಾತ್ರಿ ಹಬ್ಬವಾದ ಮಾರನೇ ದಿನವಾದ ಗುರುವಾರ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ರಾಕಾಸಮ್ಮಸ್ವಾಮಿಗೆ ಅಭಿಷೇಕ ನಡೆಸಿ, ತೋಮಾಲೆ (ಹೂವಿನ) ಅಲಂಕಾರ, ಅರ್ಚನೆ ಹಾಗೂ ಮಹಾಮಂಗಳಾರತಿ ನಡೆಯಿತು. ರಾಕಾಸಮ್ಮ ಒಕ್ಕಲಿನ ಮನೆಯ ಹೆಣ್ಣು ಮಕ್ಕಳಿಂದ
ವಾದ್ಯ ಸಮೇತ ತಂಬಿಟ್ಟು ತರುವ ಮೂಲಕ ದೇವಸ್ಥಾನ ಪ್ರರ್ದಕ್ಷಿಣೆ ಮಾಡಿ ತಂಪು ಸೇವೆ ಸಲ್ಲಿಸಿದರು. ಬಳಿಕ ದೇವಸ್ಥಾನಕ್ಕೆ ಬಂದಂತಹ ಎಲ್ಲಾ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಇಂದಿನ ಎಲ್ಲಾ ಪೂಜಾ ಕೈಂಕರ್ಯವನ್ನು ಅರ್ಚಕ ಜಗದೀಶ್ ಶಾಸ್ತ್ರೀ ನಡೆಸಿಕೊಟ್ಟರು.

ರಾಕಾಸಮ್ಮ ದೇವಸ್ಥಾನಕ್ಕೆ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ, ನಗರಸಭೆ ಅಧ್ಯಕ್ಷೆ ರೇಖಾ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಸ್ಥಾನದ ಬಳಿ ಸಮುದಾಯದ ಭವನ ನಿರ್ಮಾಣ ಮಾಡಲು ಕೈಜೋಡಿಸುವ ಭರವಸೆಯನ್ನು ಶಾಸಕರು ನೀಡಿದರು.

ದೇವಸ್ಥಾನದಲ್ಲಿ ರಾಕಾಸಮ್ಮ ತಾಯಿ ಒಕ್ಕಲಿನವರಾದ ಬೆಂಗಳೂರು, ಮೈಸೂರು, ಭೀಮನಗರ, ಶಂಕನಪುರ, ಅಜ್ಜೀಪುರ, ಮುಳ್ಳೂರು, ಬಣವೆ ಸೇರಿದಂತೆ ಹಲವು ಗ್ರಾಮದ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ನಗರಸಭೆ ಸದಸ್ಯ ಮಂಜುನಾಥ್, ಧರಣೇಶ್, ಶಾಂತರಾಜು, ನಾಗಣ್ಣ, ಪ್ರಕಾಶ್, ರಾಘವೇಂದ್ರ, ನಾಮನಿರ್ದೇಶನ ಸದಸ್ಯ ದೇವಾನಂದ, ಮುಖಂಡ ಚಿಕ್ಕಮಾಳಿಗೆ, ರಾಜಶೇಖರಮೂರ್ತಿ, ಶಿವಪ್ಪ, ಸನತ್ ಕುಮಾರ್, ಸಿದ್ದಾರ್ಥ, ಸುರೇಶ್, ಮಹದೇವಸ್ವಾಮಿ, ಲಿಂಗರಾಜು, ಪ್ರಭು ಸೇರಿದಂತೆ ನೂರಾರು ಭಕ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.