ADVERTISEMENT

ಮಲೆ ಮಹದೇಶ್ವರ ದೇವಸ್ಥಾನ: 34 ದಿನಗಳಲ್ಲಿ ₹ 2.77 ಕೋಟಿ ಹುಂಡಿ ಹಣ ಸಂಗ್ರಹ

ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ 34 ದಿನಗಳಲ್ಲಿ ₹ 2.77 ಕೋಟಿ ಹುಂಡಿ ಹಣ ಸಂಗ್ರಹವಾಗಿದೆ.

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 16:00 IST
Last Updated 24 ಡಿಸೆಂಬರ್ 2024, 16:00 IST
<div class="paragraphs"><p>ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ 34 ದಿನಗಳಲ್ಲಿ ₹ 2.77 ಕೋಟಿ ಹುಂಡಿ ಹಣ ಸಂಗ್ರಹವಾಗಿದೆ.</p></div>

ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ 34 ದಿನಗಳಲ್ಲಿ ₹ 2.77 ಕೋಟಿ ಹುಂಡಿ ಹಣ ಸಂಗ್ರಹವಾಗಿದೆ.

   

ಚಾಮರಾಜನಗರ: ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ 34 ದಿನಗಳಲ್ಲಿ ₹ 2.77 ಕೋಟಿ ಹುಂಡಿ ಹಣ ಸಂಗ್ರಹವಾಗಿದೆ.

ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಂಗಳವಾರ ಹುಂಡಿ ಹಣ ಎಣಿಕೆ ನಡೆಯಿತು. ಹುಂಡಿ ಹಾಗೂ ಇ ಹುಂಡಿಯಲ್ಲಿ ₹ 2,77,99,396 ನಗದು ಹಾಗೂ 73 ಗ್ರಾಂ ಚಿನ್ನ, 3 ಕೆ.ಜಿ 900 ಗ್ರಾಂ ಬೆಳ್ಳಿ ದೊರೆತಿದೆ. ಇದರ ಜೊತೆಗೆ ಮೂರು ವಿದೇಶಿ ನೋಟುಗಳು, 2 ಸಾವಿರ ಮುಖಬೆಲೆಯ 21 ನೋಟುಗಳು ಹುಂಡಿಗೆ ಬಿದ್ದಿವೆ.

ADVERTISEMENT

ಸಾಲೂರು ಬೃಹನ್ಮಠದ ಅಧ್ಯಕ್ಷರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ದೇವಸ್ಥಾನದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.