
ಪ್ರಜಾವಾಣಿ ವಾರ್ತೆಕೊಳ್ಳೇಗಾಲ: ಇಲ್ಲಿನ ಬಸ್ತೀಪುರ ಬಡಾವಣೆಯ ಹೊರವಲಯದಲ್ಲಿರುವ ದೊಡ್ಡ ಕಬಿನಿ ನಾಲೆಯ ಬಳಿ ಕುಡಿದ ಆಮಲಿನಲ್ಲಿ ವ್ಯಕ್ತಿಯೊಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
ಬಸ್ತೀಪುರ ಬಡಾವಣೆಯ ಆನಂದ್ (42) ಗಾಯಗೊಂಡವರು. 12 ವರ್ಷಗಳಿಂದ ಇವರ ಪತ್ನಿ ಹಾಗೂ ಮಕ್ಕಳು ಬಿಟ್ಟು ಹೋಗಿದ್ದರಿಂದ ಪ್ರತಿನಿತ್ಯ ಮದ್ಯ ಸೇವಿತ್ತಿದ್ದ. ಮಂಗಳವಾರ ಬೆಳಿಗ್ಗೆ ಬೆಂಕಿ ಹಚ್ಚಿಕೊಂಡು ಉರಿ ತಾಳಲಾರದೆ ನೀರಿಗೆ ಮುಳುಗಿ ಎದ್ದು ರಸ್ತೆಯಲ್ಲಿ ನಡೆದು ಬರುತ್ತಿದ್ದ ಆನಂದ್ ಅವರನ್ನು ಕರೆದುಕೊಂಡು ಬಂದು ಸ್ಥಳೀಯರು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಯಿತು.
ಈ ಸಂಬಂಧ ಕೊಳ್ಳೇಗಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.