ADVERTISEMENT

ಹೂವುಗಳ ಬೆಲೆ ಏರಿಕೆ

ಗೌರಿ–ಗಣೇಶ ಹಬ್ಬಕ್ಕೆ ಹೆಚ್ಚಲಿದೆ ತರಕಾರಿ, ಹಣ್ಣುಗಳ ಬೆಲೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 20:00 IST
Last Updated 26 ಆಗಸ್ಟ್ 2019, 20:00 IST
ಮಾರಾಟಕ್ಕೆ ಸಿದ್ದಗೊಂಡಿರುವ ಹೂವುಗಳು
ಮಾರಾಟಕ್ಕೆ ಸಿದ್ದಗೊಂಡಿರುವ ಹೂವುಗಳು   

ಚಾಮರಾಜನಗರ: ಗೌರಿ–ಗಣೇಶ ಹಬ್ಬಕ್ಕೆ ವಾರವಿರುವಂತೆ ಕೆಲ ಹೂವುಗಳ ಬೆಲೆ ಏರಿಕೆಯಾಗಿದೆ.ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಎಲ್ಲ ಹೂವುಗಳಬೆಲೆಯಲ್ಲಿ ಏರಿಕೆ ಕಂಡು ಬಂದಿತ್ತು. ಹಬ್ಬಗಳ ಸಂದರ್ಭದಲ್ಲಿ ಗರಿಷ್ಠ ಮಟ್ಟಕ್ಕೆ ಏರಿತ್ತು.

ಈ ವಾರ ಬಿಡಿಹೂವಿನಮಾರುಕಟ್ಟೆಯಲ್ಲಿ ಕನಕಾಂಬರ, ಮಲ್ಲಿಗೆ, ಮೊಳ್ಳೆ ಸೇರಿದಂತೆ ಬಹುತೇಕ ಹೂವುಗಳ ಬೆಲೆ ಹೆಚ್ಚಳವಾಗಿದೆ. ಕಳೆದ ವಾರ ಕೆಜಿಗೆ ₹ 200–₹ 400ರವರೆಗೆ ಇದ್ದ ಕನಕಾಂಬರ, ಈ ವಾರ ₹ 1,500–₹ 2,000ರವರೆಗೆ ಇದೆ. 100 ಗುಲಾಬಿಗಳ ಬೆಲೆ ₹ 150 ಆಗಿದೆ. ಮಲ್ಲಿಗೆಗೆ ₹ 300ರವರೆಗೂ ಬೆಲೆ ಇದೆ.

ತರಕಾರಿಗಳ ಪೈಕಿ ಗೋರಿಕಾಯಿ₹ 20, ಬೀನ್ಸ್‌ ಹಾಗೂ ಹೀರೆಕಾಯಿ₹ 10, ಈರುಳ್ಳಿಯ ಬೆಲೆ ₹5 ಏರಿಕೆಯಾಗಿದೆ. ಶುಂಠಿ ಮಾತ್ರ₹ 20 ಕಡಿಮೆಯಾಗಿದೆ. ಉಳಿದಂತೆ ಎಲ್ಲ ತರಕಾರಿಗಳ ಬೆಲೆ ಯಥಾಸ್ಥಿತಿ ಇದೆ. ಹಣ್ಣುಗಳ ಪೈಕಿ ಕಲ್ಲಂಗಡಿ, ಪಚ್ಚೆಬಾಳೆ ₹ 5 ಹೆಚ್ಚಳವಾಗಿದೆ.

ADVERTISEMENT

‘ಈ ವಾರ ಮಳೆ ಪ್ರಮಾಣ ಇಳಿಮುಖವಾಗಿದೆ. ಮುಂದಿನ ವಾರ ಗಣೇಶ ಹಬ್ಬ ಇರುವುದರಿಂದವಾರಾಂತ್ಯಕ್ಕೆ ತರಕಾರಿ, ಹಣ್ಣುಗಳ ಬೆಲೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಹೇಳಿದರು.

‘ಕಡೆ ಶ್ರಾವಣ ಶನಿವಾರದ ದಿನ ದೇವಾಲಯಗಳಲ್ಲಿ ವಿಶೇಷ ಪೂಜೆ ಇದ್ದರಿಂದ ಶುಕ್ರವಾರ ಹೂವುಗಳ ಬೆಲೆ ಏರಿಕೆಯಾಗಿತ್ತು. ಈಗ ತುಸು ಇಳಿದಿದೆ. ಮುಂದಿನ ವಾರಹೂವುಗಳಿಗೆ ಬೇಡಿಕೆ ಇರಲಿದೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ಮಹೇಶ್ ಹೇಳಿದರು.

ಈ ವಾರ ಮೊಟ್ಟೆ₹10 ಇಳಿಕೆಯಾಗಿದೆ. ಕಳೆದ ವಾರ 100 ಮೊಟ್ಟೆಗೆ ₹345 (ಮಂಗಳವಾರದ ಬೆಲೆ) ಇತ್ತು. ಸೋಮವಾರ ₹ 335ಕ್ಕೆ ಇಳಿದಿದೆ. ಇನ್ನೆರಡು ದಿನಗಳಲ್ಲಿ ಮೊಟ್ಟೆ ಬೆಲೆಯಲ್ಲಿ ಕೆಲ ವ್ಯತ್ಯಾಸಗಳು ಆಗಬಹುದುಎನ್ನುತ್ತಾರೆಮೊಟ್ಟೆವ್ಯಾಪಾರಿಗಳು.

ಮಾಂಸ ಮಾರುಕಟ್ಟೆಯಲ್ಲಿ ಎಲ್ಲ ಬಗೆಯ ಮಾಂಸಗಳ ಹಾಗೂ ಮೀನುಗಳ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.