ADVERTISEMENT

ರವಿಶಂಕರ್ ಪರ ಎನ್.ಮಹೇಶ್, ರಾಮಚಂದ್ರ ಪ್ರಚಾರ

​ಪ್ರಜಾವಾಣಿ ವಾರ್ತೆ
Published 28 ಮೇ 2022, 16:26 IST
Last Updated 28 ಮೇ 2022, 16:26 IST
ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಹಾಗೂ ಬಿಜೆಪಿ ಮುಖಂಡರು ಮೈ.ವಿ.ರವಿಶಂಕರ್‌ ಅವರ ಪರವಾಗಿ ಮತಯಾಚನೆ ಮಾಡಿದರು
ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಹಾಗೂ ಬಿಜೆಪಿ ಮುಖಂಡರು ಮೈ.ವಿ.ರವಿಶಂಕರ್‌ ಅವರ ಪರವಾಗಿ ಮತಯಾಚನೆ ಮಾಡಿದರು   

ಚಾಮರಾಜನಗರ: ವಿಧಾನಪರಿಷತ್ತಿನ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಮಹೇಶ್ ಹಾಗೂ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಅವರು ಶನಿವಾರ ನಗರದ ವಿವಿದೆಡೆ ಮತಯಾಚಿಸಿದರು.

ನಗರದ ಸೋಮವಾರಪೇಟೆ, ಭುಜಂಗೇಶ್ವರಬಡಾವಣೆ, ದೀನಬಂಧು ಶಾಲೆ, ರಾಮಸಮುದ್ರ ಬಡಾವಣೆಗಳಲ್ಲಿ ಪದವೀಧರ ಮತದಾರರ ಮನೆಮನೆ ಭೇಟಿ ನೀಡಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.

ಎನ್‌.ಮಹೇಶ್‌ ಅವರು ಮಾತನಾಡಿ, ‘ರವಿಶಂಕರ್ ಅವರು ನಮ್ಮ ರೀತಿ ರಾಜಕಾರಣಿ ಅಲ್ಲ. ಸಾಮಾನ್ಯ ಕಾರ್ಯಕರ್ತ. ಶಿಕ್ಷಣಕ್ಷೇತ್ರ, ನಿರುದ್ಯೋಗ, ಯವಕರ ಬಗ್ಗೆ ಅರಿವು ಹೊಂದಿರುವ ವ್ಯಕ್ತಿ. ಅವರನ್ನು ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಗೆಲ್ಲಿಸಿದರೆ ಪದವೀಧರು, ಶಿಕ್ಷರರ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್‌ನಲ್ಲಿ ಚರ್ಚಿಸಿ ಹೋರಾಟ ಮಾಡಲಿದ್ದಾರೆ’ ಎಂದರು

ADVERTISEMENT

ಶಿಕ್ಷಣ ಇಲಾಖೆಯು ಮಕ್ಕಳನ್ನು ಸಮಗ್ರವಾಗಿ ವಿಕಸನಗೊಳಿಸಲು ಹೊರಟಿದೆ. ಇದಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿ ಪೂರಕವಾಗಿದ್ದು ಬಿಜೆಪಿ ಕೇಂದ್ರ, ರಾಜ್ಯ ಸರ್ಕಾರಗಳು ಶ್ರಮವಹಿಸಿ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿವೆ. ಪದವೀಧರು, ಪದವೀಧರ ಶಿಕ್ಷಕರ ಸಮಸ್ಯೆಗಳ ನಿವಾರಣೆಗಾಗಿ ಪಕ್ಷದ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರನ್ನು ಆಶೀರ್ವದಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಾಗಶ್ರೀ ಪ್ರತಾಪ್, ನಾರಾಯಣ ಪ್ರಸಾದ್, ಉಪಾಧ್ಯಕ್ಷ ದತ್ತೇಶ್ ಕುಮಾರ್,ಚುಡಾ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ, ಮುಖಂಡರಾದ ಸುರೇಶ್ ನಾಯಕ, ಮಹದೇವನಾಯಕ, ನಗರ ಅಧ್ಯಕ್ಷ ರಾಜು, ನಗರ ಪ್ರಧಾನ ಕಾರ್ಯದರ್ಶಿ ಶಿವಣ್ಣ ಎಸ್ ಸಿ ಮೋರ್ಚಾದ ಉಪಾಧ್ಯಕ್ಷ ರಾಮಸಮುದ್ರ ವೇಣುಗೋಪಾಲ್, ನಗರಸಭಾ ಸದಸ್ಯ ಶಿವರಾಜ್, ಚಂದ್ರಶೇಖರ್, ಗಾಯಿತ್ರಿಚಂದ್ರಶೇಖರ್, ಮಮತಬಾಲಸುಬ್ರಹ್ಮಣ್ಯ, ಕುಮುದಾ ಕೇಶವಮೂರ್ತಿ, ಮುಖಂಡ ಆರ್.ಪುಟ್ಟಮಲ್ಲಪ್ಪ, ಆರ್.ವಿ.ಮಹದೇವಸ್ವಾಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.