ADVERTISEMENT

ಇಂದು ಮಾದಪ್ಪನ ಮಹಾ ರಥೋತ್ಸವ

ಮಹದೇಶ್ವರ ಬೆಟ್ಟ: ನಾಲ್ಕು ದಿನಗಳಲ್ಲಿ ಐದು ಲಕ್ಷ ಭಕ್ತರ ಭೇಟಿ, 6 ಲಕ್ಷ ಲಾಡು ಮಾರಾಟ, ಇಂದು ಜಾತ್ರೆಗೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 14:31 IST
Last Updated 23 ಫೆಬ್ರುವರಿ 2020, 14:31 IST
ಮಹದೇಶ್ವರ ಬೆಟ್ಟದಲ್ಲಿ ಭಾನುವಾರ ಸೇರಿದ್ದ ಭಕ್ತರು
ಮಹದೇಶ್ವರ ಬೆಟ್ಟದಲ್ಲಿ ಭಾನುವಾರ ಸೇರಿದ್ದ ಭಕ್ತರು   

ಹನೂರು: ಮಹದೇಶ್ವರಬೆಟ್ಟದಲ್ಲಿನಾಲ್ಕುದಿನಗಳಿಂದನಡೆಯುತ್ತಿರುವಮಹಾಶಿವರಾತ್ರಿಜಾತ್ರಾಮಹೋತ್ಸವದ ಅಂಗವಾಗಿ ಸೋಮವಾರ ಮಹಾ ರಥೋತ್ಸವ ನಡೆಯಲಿದ್ದು, ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆ ಇದೆ.

ಬೆಳಿಗ್ಗೆ 9.50ರಿಂದ 11 ಗಂಟೆಯವರೆಗೆ ರಥೋತ್ಸವ ನಡೆಯಲಿದೆ. ರಾತ್ರಿ ಅಭಿಷೇಕ ಮುಗಿದ ನಂತರ ಕೊಂಡೋತ್ಸವ ನಡೆಯಲಿದೆ. ಆ ಮೂಲಕ ನಾಲ್ಕು ದಿನಗಳ ಶಿವರಾತ್ರಿ ಜಾತ್ರೆಗೆ ತೆರೆ ಬೀಳಲಿದೆ.

ನಾಲ್ಕು ದಿನಗಳಲ್ಲಿ ನಾಲ್ಕರಿಂದ ಐದುಲಕ್ಷ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದಿದ್ದಾರೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಆರು ಲಕ್ಷ ಲಾಡು ಪ್ರಸಾದ ವಿತರಿಸಲಾಗಿದೆ. ಶನಿವಾರ ಒಂದೇ ದಿನ ಹುಂಡಿ ಬಿಟ್ಟು, ₹73 ಲಕ್ಷ ಹಣ ಸಂಗ್ರಹವಾಗಿದೆ.

ADVERTISEMENT

ಜಾತ್ರೆಗಾಗಿ ಕಾಲ್ನಡಿಗೆಯಲ್ಲಿ ಬಂದಿರುವ ಭಕ್ತರು ಈಗಾಗಲೇ ವಾಪಸ್ಸಾಗಿದ್ದಾರೆ. ಶನಿವಾರದಿಂದ ವಾಹನಗಳಲ್ಲಿ ಬರುತ್ತಿರುವವರ ಸಂಖ್ಯೆ ಹೆಚ್ಚಿದೆ. ಭಾನುವಾರವೂ ಇದು ಮುಂದುವರಿದಿದೆ.ಮಹಾರಥೋತ್ಸವವನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಹತ್ತಿರದ ಮಾತ್ರವಲ್ಲದೇ ದೂರದ ಊರುಗಳಿಂದಲೂ ಭಕ್ತರು ಬರುತ್ತಿದ್ದಾರೆ. ಹೆಚ್ಚಿನಸಂಖ್ಯೆಯಲ್ಲಿ ವಾಹನಗಳು ಆಗಮಿಸುತ್ತಿರುವುದರಿಂದಹನೂರು,ಕೌದಳ್ಳಿ,ತಾಳಬೆಟ್ಟದಿಂದ ಆನೆತಲೆದಿಂಬದವರೆಗೆಅಲ್ಲಲ್ಲಿಸಂಚಾರ ದಟ್ಟಣೆ ಉಂಟಾಗಿದೆ.

ಧಾರ್ಮಿಕ ವಿಧಿವಿಧಾನಗಳು

ಜಾತ್ರಾ ಮಹೋತ್ಸವದ ಭಾಗವಾಗಿ ಭಾನುವಾರವೂ ಕ್ಷೇತ್ರದಲ್ಲಿ ಅಮಾವಾಸ್ಯೆ ವಿಶೇಷ ಉತ್ಸವಾದಿಗಳು ನಡೆದವು. ಬೆಳಗ್ಗಿನಜಾವ3ಗಂಟೆಯಿಂದದೇವರಿಗೆಜಲಾಭಿಷೇಕ,ಕ್ಷೀರಾಭಿಷೇಕ,ಬಿಲ್ವಾರ್ಚನೆಹಾಗೂಮಹಾರುದ್ರಾಭಿಷೇಕಇನ್ನಿತರೆಪೂಜಾಕಾರ್ಯಗಳನ್ನು ಬೇಡಗಂಪಣದಅರ್ಚಕರುನೆರವೇರಿಸಿದರು. ಹುಲಿವಾಹನ ಸೇವೆ, ಪಂಜಿನ ಸೇವೆ ಸೇರಿದಂತೆ ವಿವಿಧ ಸೇವೆಗಳು ಎಂದಿನಂತೆ ನಡೆದವು.

ಜಾನಪದಉತ್ಸವಕಾರ್ಯಕ್ರಮ ಭಾನುವಾರವೂ ಮುಂದುವರಿಯಿತು. ಚಾಮರಾಜನಗರ ಜಿಲ್ಲೆನಾನಾಭಾಗಗಳಿಂದಜಾನಪದ ಕಲಾತಂಡಗಳುಭಾಗವಹಿಸಿಗೊರವರ ಕುಣಿತ,ತಂಬೂರಿ,ಕಂಸಾಳೆ ಸೇರಿದಂತೆಇನ್ನಿತರೆಕಲಾತಂಡಗಳುತಮ್ಮ ಕಲೆಯನ್ನು ಪ್ರದರ್ಶಿಸಿನೆರೆದಿದ್ದ ಭಕ್ತರ ಮನರಂಜಿಸಿದರು.

‌ರಾತ್ರಿ ಬೆಂಗಳೂರಿನ ಸಪ್ತಸ್ವರ ಕಲಾ ಸಂಸ್ಥೆಯ ಮಂಜುಳಾ ಪರಮೇಶ್‌ ಅವರ ತಂಡ ಪ್ರದರ್ಶಿಸಿದ ‘ನೃತ್ಯ ಸಂಭ್ರಮ’ ಕಾರ್ಯಕ್ರಮ ಗಮನಸೆಳೆಯಿತು.

ತೆರವು

ಪಾಲಾರ್‌ ಗೇಟ್‌ ಬಳಿ ರಸ್ತೆಬದಿಯಲ್ಲಿ ಕೆಲವರು ಅನಧಿಕೃತವಾಗಿ ವ್ಯಾಪಾರ ಮಾಡಿಕೊಂಡಿದ್ದವರಿಂದ ಸಂಚಾರ ದಟ್ಟಣೆ ಹಾಗೂ ಅನೈರ್ಮಲ್ಯ ಉಂಟಾಗುತ್ತಿತ್ತು, ಹಾಗಾಗಿ, ಪ್ರಾಧಿಕಾರದಅಧಿಕಾರಿಗಳು ವ್ಯಾಪಾರಿಗಳನ್ನು ಅಲ್ಲಿಂದ ಬೇರೆ ಕಡೆಗೆ ಕಳುಹಿಸಿದರು.

ಇಂದು ಜನಪರ ಉತ್ಸವ: ಜಾತ್ರೆಯ ಅಂಗವಾಗಿ ಸೋಮವಾರ ಬೆಳಿಗ್ಗೆ ಬೆಟ್ಟದಲ್ಲಿ ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಜನಪರ ಉತ್ಸವ ನಡೆಯಲಿದೆ.

6ಲಕ್ಷಲಾಡುಮಾರಾಟ

ಜಾತ್ರೆಯನಾಲ್ಕುದಿನಗಳಲ್ಲಿಇದುವರೆಗೆಸುಮಾರು6ಲಕ್ಷಲಾಡುಗಳುಮಾರಾಟವಾಗಿವೆ.

‘ಪ್ರಾಧಿಕಾರದವತಿಯಿಂದ7.6ಲಕ್ಷಲಾಡುತಯಾರಿಸಲಾಗಿತ್ತು. ನಾಲ್ಕುದಿನಗಳಲ್ಲಿ ಶೇ85ರಷ್ಟುಲಾಡುಮಾರಾಟವಾದ ಪರಿಣಾಮಹೆಚ್ಚುವರಿಯಾಗಿ ಪ್ರತಿ ದಿನ 40ಸಾವಿರಲಾಡು ತಯಾರಿಸಲಾಗುತ್ತಿದೆ. ಸೋಮವಾರಮಹಾರಥೋತ್ಸವ ನಡೆಯುವುದರಿಂದಭಕ್ತರುಹೆಚ್ಚಿನಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದೆ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಅವರು ‘ಪ್ರಜಾವಾಣಿ’ಗೆತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.