ಹನೂರು: ಮಲೆ ಮಹದೇಶ್ವರ ವನ್ಯಧಾಮದ ಗಂಧದ ಮರ ಕಡಿತಲೆ ಮಾಡುತ್ತಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
ಪಿ.ಜಿ. ಪಾಳ್ಯ ವಲಯದ ಅಂಡೆಕುರುಬನದೊಡ್ಡಿ ಗಸ್ತಿನ ಸಿಬ್ಬಂದಿ ಗಸ್ತು ಮಾಡುತ್ತಿರುವಾಗ, ವನ್ಯಧಾಮಕ್ಕೆ ಅಕ್ರಮ ಪ್ರವೇಶ ಮಾಡಿ ಶ್ರೀಗಂಧದ ಮರ ಕಡಿತಲೆ ಮಾಡುತ್ತಿದ್ದ ಚೆನ್ನಬಸಪ್ಪ ಎಂಬಾತನ್ನು ಸೆರೆ ಹಿಡಿದಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸ್ಥಳದಲ್ಲಿ 5 ಕೆ.ಜಿ ಶ್ರೀಗಂಧ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಲಯ ಅರಣ್ಯಾಧಿಕಾರಿ ಪುಟ್ಟರಾಜು ಜಿ., ಉಪ ವಲಯ ಅರಣ್ಯಾಧಿಕಾರಿ ಮಹೇಶ್ ಎಂ., ಗಸ್ತು ವನಪಾಲಕ ತಿಮ್ಮಣ, ವಿನಯ್, ಮಲಕಾರಿ, ಪುಟ್ಟಶೆಟ್ಟಿ, ಜಡೆಯಪ್ಪ, ನಂದಕುಮಾರ್ ಮತ್ತು ಶಿವಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.