ADVERTISEMENT

ಕೊಳ್ಳೇಗಾಲ: ₹17 ಲಕ್ಷ ಮೌಲ್ಯದ ರಕ್ತ ಚಂದನ ಸಾಗಣೆ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 29 ಜೂನ್ 2023, 15:33 IST
Last Updated 29 ಜೂನ್ 2023, 15:33 IST
   

ಕೊಳ್ಳೇಗಾಲ: ಸ್ಯಾಂಟ್ರೊ ಕಾರಿನಲ್ಲಿ ₹17 ಲಕ್ಷ ಮೌಲ್ಯದ 284 ಕೆಜಿಗಳಷ್ಟು ರಕ್ತ ಚಂದನವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ನಗರದ ಅರಣ್ಯ ಸಂಚಾರ ದಳದ ಪೊಲೀಸರು ಬಂಧಿಸಿದ್ದಾರೆ. 

ಪೊಲೀಸರು ಬುಧವಾರ ಈ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರಿನ ವಿಜಯನಗರ ಬಡಾವಣೆಯ ಅರುಣ್ ಕುಮಾರ್ (26), ಬೆಂಗಳೂರು ನಾಯಂಡಳ್ಳಿಯ ಆನಂದ (46) ಹಾಗೂ ತುಮಕೂರು ಜಿಲ್ಲೆಯ ಸೋಮೇಶ್ವರಪುರಂನ ತ್ರಬುದುಲ್ ಮುನಾಫ್ (52) ಬಂಧಿತ ಆರೋಪಿಗಳು.

ಮಾರಾಟ ಮಾಡುವ ಉದ್ದೇಶದಿಂದ ರಕ್ತಚಂದನದ 14 ದೊಡ್ಡ ತುಂಡುಗಳನ್ನು ಸ್ಯಾಂಟ್ರೊ ಕಾರಿನಲ್ಲಿ ತುಂಬಿ ಸಾಗಣೆ ಮಾಡುತ್ತಿದ್ದರು. 

ADVERTISEMENT

ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಪೊಲೀಸರು ತಾಲ್ಲೂಕಿನ ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ ಬಳಿ ಕಾರು ತಡೆದು ಪರಿಶೀಲಿಸಿದಾಗ ರಕ್ತ ಚಂದನ ಇರುವುದು ಕಂಡು ಬಂದಿದೆ. ಮೂವರನ್ನು ಬಂಧಿಸಿರುವ ಪೊಲೀಸರು, ರಕ್ತಚಂದನ, ಕಾರು ಮತ್ತು ₹1,320 ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಪ್ರಕರಣವನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.   

ಅರಣ್ಯ ಸಂಚಾರಿ ದಳದ ಪಿಎಸ್ಐ ವಿಜಯರಾಜು ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಸಿಬ್ಬಂದಿ ತಖೀಉಲ್ಲಾ, ರಾಮಚಂದ್ರ, ಶಂಕರ್, ಸ್ವಾಮಿ, ಬಸವರಾಜು, ಚಾಲಕ ಪ್ರಭಾಕರ್, ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.