ADVERTISEMENT

ಅಕ್ರಮ ಸಂಪತ್ತಿನ ಕುರೂಪಿ ಪ್ರದರ್ಶನ: ಮೇಕೆದಾಟು ಯೋಜನೆ ಬಗ್ಗೆ ಸಂಸದ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 7:24 IST
Last Updated 28 ಫೆಬ್ರುವರಿ 2022, 7:24 IST
ವಿ.ಶ್ರೀನಿವಾಸ ಪ್ರಸಾದ್
ವಿ.ಶ್ರೀನಿವಾಸ ಪ್ರಸಾದ್   

ಚಾಮರಾಜನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯು ಅಕ್ರಮವಾಗಿ ಸಂಪಾದಿಸಿರುವ ಸಂಪತ್ತಿನ ಕುರೂಪಿ ಪ್ರದರ್ಶನ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮೇಕೆದಾಟು ಯೋಜನೆ ಅನುಷ್ಠಾನ ಆಗಬೇಕು ಎಂಬುದು ಇಡೀ ರಾಜ್ಯದ ಬೇಡಿಕೆ. ಯೋಜನೆ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯೂ ಅನುಮತಿ ಕೊಡಬೇಕಿದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಪಾದಯಾತ್ರೆ ಮಾಡುವುದರಿಂದ ಏನೂ ಪ್ರಯೋಜನ ಇಲ್ಲ' ಎಂದರು.

'ಒಬ್ಬ ವ್ಯಕ್ತಿಯ ಪ್ರಚಾರಕ್ಕಾಗಿ ಪಾದಯಾತ್ರೆ ನಡೆಸಲಾಗುತ್ತಿದೆ. ಪಾದಯಾತ್ರೆಗೆ ಬರುವವರಿಗೆ ಉಚಿತ ಪೆಟ್ರೋಲ್, ಬಸ್ ವ್ಯವಸ್ಥೆ, ಬಿರಿಯಾನಿ ಊಟ ಎಲ್ಲ ಪೂರೈಸಲಾಗುತ್ತಿದೆ. ಅಕ್ರಮವಾಗಿ ಮಾಡಿರುವ ಸಂಪಾದನೆಯನ್ನು ಪಾದಯಾತ್ರೆಯ ಮೂಲಕ ಪ್ರದರ್ಶಿಸಲಾಗುತ್ತಿದೆ. ಸರ್ವ ಪಕ್ಷ ನಿಯೋಗದಿಂದ ಪ್ರಧಾನಿ ಅವರನ್ನು ಭೇಟಿ ಮಾಡಿ ಯೋಜನೆ ಅನಿಷ್ಠಾನದ ಬಗ್ಗೆ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿಲಿ. ಅದು ಬಿಟ್ಟು ಪಾದಯಾತ್ರೆ ಮಾಡುವುದು ಸಮಂಜಸವಲ್ಲ' ಎಂದು ಹೇಳಿದರು.

ADVERTISEMENT

ವಿವಿ ಕೇಳಿದ್ದೇನೆ: 'ಈ ಸಾಲಿನ ರಾಜ್ಯ ಬಜೆಟ್ ನಲ್ಲಿ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ಕೇಳಿದ್ದೇನೆ.‌ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೇನೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.