ADVERTISEMENT

ನಿಟ್ಟೂರು: ಸಹಕಾರ ಸಂಘಕ್ಕೆ ತಿಮ್ಮರಾಜು ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:57 IST
Last Updated 22 ನವೆಂಬರ್ 2025, 4:57 IST
ಹಲಗೂರು ಸಮೀಪದ ನಿಟ್ಟೂರು ಗ್ರಾಮದ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ತಿಮ್ಮರಾಜು ಮತ್ತು ಉಪಾಧ್ಯಕ್ಷೆ ಕೆಂಪಾಜಮ್ಮ ಅವರನ್ನು ಅಭಿನಂದಿಸಲಾಯಿತು
ಹಲಗೂರು ಸಮೀಪದ ನಿಟ್ಟೂರು ಗ್ರಾಮದ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ತಿಮ್ಮರಾಜು ಮತ್ತು ಉಪಾಧ್ಯಕ್ಷೆ ಕೆಂಪಾಜಮ್ಮ ಅವರನ್ನು ಅಭಿನಂದಿಸಲಾಯಿತು   

ಹಲಗೂರು: ಸಮೀಪದ ನಿಟ್ಟೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಸರಗೂರು ಗ್ರಾಮದ ತಿಮ್ಮರಾಜು, ಉಪಾಧ್ಯಕ್ಷರಾಗಿ ಹೊಸದೊಡ್ಡಿ ಗ್ರಾಮದ ಕೆಂಪಾಜಮ್ಮ ಅವಿರೋಧವಾಗಿ ಆಯ್ಕೆಯಾದರು.

12 ಸದಸ್ಯ ಬಲದ ಸಂಘಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ರಾಮಕೃಷ್ಣ ಅವಿರೋಧ ಆಯ್ಕೆ ಘೋಷಿಸಿದರು.

ಅಧ್ಯಕ್ಷ ತಿಮ್ಮರಾಜು ಮಾತನಾಡಿ, ‘ಸಂಘದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೆ ಇಲಾಖೆಯಿಂದ ಸಂಘದ ಸದಸ್ಯರಿಗೆ ದೊರಕುವ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಸಾಲ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸುವ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುವ ಮೂಲಕ ಸಹಕಾರ ಸಂಘದ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ನಿರ್ದೇಶಕರಾದ ಮರಿಸ್ವಾಮಿ, ಎಸ್.ಎಂ.ಸುರೇಶ್, ಎಚ್.ಸಿ.ರಮೇಶ್, ಎಚ್.ಎಲ್.ಬಸವರಾಜು, ಕೆ.ಎಸ್. ಕೆಂಪೇಗೌಡ, ನಾರಾಯಣ, ವಿ.ಲಕ್ಷ್ಮೀ, ಕೆ.ಎಸ್.ಜಯರಾಮೇಗೌಡ, ಜಗದೀಶ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಕುಂತೂರು ಗೋಪಾಲ್, ಸೋಮಶೇಖರ್, ಭೀಮರಾಜು, ಸತೀಶ್, ವೀರಭದ್ರಸ್ವಾಮಿ, ಚಿಕ್ಕಸಿದ್ದಯ್ಯ, ಶಿವಣ್ಣ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.