ADVERTISEMENT

ಚಿಕ್ಕಲ್ಲೂರು: ಮಾಂಸಾಹಾರ ಅಡುಗೆ ಸಿದ್ಧಪಡಿಸಿ ಭಕ್ತರ ಸಹಭೋಜನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 15:27 IST
Last Updated 13 ಜನವರಿ 2020, 15:27 IST
ಪಂಕ್ತಿಸೇವೆಗಾಗಿ ಮಾಂಸದ ಅಡುಗೆ ಸಿದ್ಧಪಡಿಸುವುದರಲ್ಲಿ ನಿರತರಾಗಿದ್ದ ಭಕ್ತರು
ಪಂಕ್ತಿಸೇವೆಗಾಗಿ ಮಾಂಸದ ಅಡುಗೆ ಸಿದ್ಧಪಡಿಸುವುದರಲ್ಲಿ ನಿರತರಾಗಿದ್ದ ಭಕ್ತರು   

ಹನೂರು: ಸಮೀಪದ ಚಿಕ್ಕಲ್ಲೂರು ಸಿದ್ದಪ್ಪಾಜಿಜಾತ್ರೆಯಲ್ಲಿಸೋಮವಾರ ಬಾಡೂಟದಪಂಕ್ತಿಸೇವೆ (ಸಿದ್ಧರಸೇವೆ) ಜಿಲ್ಲಾಡಳಿತ, ಪೊಲೀಸರ ಹದ್ದಿನ ಕಣ್ಣಿನ ನಡುವೆಯೇ ಯಾವುದೇ ಆತಂಕವಿಲ್ಲದೇ ಯಶಸ್ವಿಯಾಗಿ ನಡೆಯಿತು.

ಹರಕೆ ಹೊತ್ತ ಭಕ್ತರು ಗದ್ದಿಗೆಗೆ ಹಾಗೂ ಕಂಡಾಯಗಳಿಗೆ ಮಾಂಸಹಾರದ ಎಡೆ ಹಾಕಿ ಸಹಪಂಕ್ತಿಬೋಜನ ಮಾಡಿದರು.

ಜಾತ್ರೆಯನಾಲ್ಕನೇದಿನದಂದುಜರುಗಿದ ಪಂಕ್ತಿಸೇವೆಗೆ ಜಿಲ್ಲೆಸೇರಿದಂತೆಹೊರಜಿಲ್ಲೆಗಳಿಂದ ಟೆಂಪೊ, ಗೂಡ್ಸ್ಆಟೊ, ಟ್ರ್ಯಾಕ್ಟರ್‌,ಲಾರಿ,ದ್ವಿಚಕ್ರವಾಹನಹಾಗೂಬಸ್‌ಗಳಲ್ಲಿಬಂದಭಕ್ತರು ದೇವಸ್ಥಾನದಹೊರಭಾಗದಲ್ಲಿ ಬಿಡಾರ ಹೂಡಿದ್ದರು.

ADVERTISEMENT

ಸೋಮವಾರಬೆಳಿಗ್ಗೆಮೇಕೆ,ಕೋಳಿಗಳನ್ನುಕೊಯ್ದುಪ್ರತಿಬಿಡಾರದಮುಂದೆಪ್ರತಿಷ್ಠಾಪಿಸಿದ್ದಕಂಡಾಯಗಳಿಗೆ ಮಾಂಸಹಾರದ ಎಡೆ ಇಟ್ಟು ಪೂಜೆ ಸಲ್ಲಿಸಿ ನೈವೇದ್ಯಅರ್ಪಿಸಿದರು. ಕೆಲ ಭಕ್ತರು ಸಸ್ಯಹಾರದ ಅಡುಗೆ ಮಾಡಿ ಎಡೆ ಇಟ್ಟುಜಾತ್ರೆಗೆಆಗಮಿಸಿದ್ದನೆಂಟರು,ಸ್ನೇಹಿತರುಮತ್ತುಕುಟುಂಬದಸದಸ್ಯರೊಂದಿಗೆ ಸಾಮೂಹಿಕವಾಗಿಬೋಜನ ಮಾಡಿದರು. ಜಾತ್ರೆಯಲ್ಲಿ ನೂತನವಾಗಿ ದೀಕ್ಷೆ ಪಡೆದ ನೀಲಗಾರರು ಪ್ರತಿಬಿಡಾರಗಳಿಗೂ ತೆರಳಿಭಿಕ್ಷಾಟನೆ ಮಾಡುವ ಪಂಕ್ತಿಸೇವೆಗೆಚಾಲನೆನೀಡಿದರು.

ತಲೆತಲಾಂತರಗಳಿಂದಲೂನಡೆದುಕೊಂಡುಬಂದಿರುವಜಾತ್ರೆಯಲ್ಲಿಭಕ್ತರುದೂಳನ್ನುಲೆಕ್ಕಿಸದೆ,ನೀಲಗಾರವಿಧಾನಗಳೊಡನೆಸಿದ್ದಪ್ಪಾಜಿಜಾತ್ರೆಯಲ್ಲಿಪಾಲ್ಗೊಂಡರು.ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ನಿರಂತರವಾಗಿ ಆಗಮಿಸಿದ್ದರಿಂದ ಕೆಲವು ಕಡೆ ಸಂಚಾರ ದಟ್ಟಣೆ ಉಂಟಾಯಿತು. ದೇವರಪೂಜೆಗೆಸಹಸ್ರಾರುಭಕ್ತರುಏಕಾಏಕಿಮುಂದಾದಹಿನ್ನೆಲೆಯಲ್ಲಿಬಾರಿನೂಕುನುಗ್ಗಲುಉಂಟಾಗಿ,ಪೊಲೀಸರುಭಕ್ತರನ್ನುನಿಯಂತ್ರಿಸಲುಹರಸಾಹಸಪಟ್ಟರು.

ಪ್ರಾಣಿಬಲಿ ತಡೆಯುವ ಉದ್ದೇಶದಿಂದಜಾತ್ರೆಯ ಸುತ್ತ ಎಂಟು ಕಡೆ ಚೆಕ್ ಪೋಸ್ಟ್ ನಿರ್ಮಿಸಿ ಕುರಿ, ಮೇಕೆ , ಕೋಳಿ ಹಾಗೂ ಮದ್ಯವನ್ನು ತೆಗೆದುಕೊಂಡು ಹೋಗುವುದನ್ನು ಸಂಪೂರ್ಣವಾಗಿ ತಡೆಯಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿತ್ತು. ಇವೆಲ್ಲದರ ನಡುವೆಯೂ ಸಿದ್ದಪ್ಪಾಜಿ ಜಾತ್ರೆಯ ಕೇಂದ್ರಬಿಂದುವಾದ ಪಂಕ್ತಿಸೇವೆ ಯಾವುದೇ ಅಡೆತಡೆಯಿಲ್ಲದೇ ಸಾಂಗವಾಗಿ ನಡೆಯಿತು.

ಕೆಲ ಭಕ್ತರು ಜಾತ್ರೆಯ ಹೊರಗಿನ ದೂರದ ಖಾಸಗಿ ಜಮೀನುಗಳಲ್ಲಿ ಸಿದ್ದಪ್ಪಾಜಿ ತೀರ್ಥ ತೆಗೆದುಕೊಂಡು ಹೋಗಿ ಮೇಕೆಗಳ ಮೇಲೆ ಹಾಕಿ ಅದನ್ನು ಕೊಯ್ದು ಆಹಾರ ತಯಾರಿ ಮಾಡಿ ಎಡೆ ಅರ್ಪಿಸಿದರೆ. ಇನ್ನು ಕೆಲ ಭಕ್ತರು ಮನೆಯಲ್ಲಿ ಮಾಂಸ ಕತ್ತರಿಸಿ ಜಾತ್ರೆಗೆ ತಂದು ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡಿದರು.

ಹೆಚ್ಚು ಭಕ್ತರು: ಪಂಕ್ತಿಸೇವೆಯಲ್ಲಿ ಈ ಬಾರಿ ಕಳೆದ ವರ್ಷಕ್ಕಿಂತಲೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.

‘ಸಿದ್ದಪ್ಪಾಜಿ ನಮ್ಮ ಮನೆ ದೇವರು. ನಾವು 40 ವರ್ಷಗಳಿಂದಲೂ ಪಂಕ್ತಿಸೇವೆ ಮಾಡುತ್ತಾ ಬಂದಿದ್ದೇವೆ. ಯಾರೋ ಪ್ರಾಣಿಬಲಿ ನಡೆಯುತ್ತಿದೆ ಎಂದು ತಪ್ಪಾಗಿ ಹೇಳಿದ್ದಾರೆ. ಇದನ್ನೇ ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಕಾನೂನು ಪಾಲನೆ ಮಾಡುವ ನೆಪದಲ್ಲಿ ಭಕ್ತರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುವುದು ಸರಿಯಲ್ಲ’ ಎಂದು ಕನಕಪುರದ ಗುರುಮೂರ್ತಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ದೇವಾಲಯದಿಂದ ದೂರ

ಸಿದ್ದಪ್ಪಾಜಿ ದೇವಾಲಯದ ಸುತ್ತಮುತ್ತಲಿನ ಆವರಣದಲ್ಲಿ ಪಂಕ್ತಿಸೇವೆ ನಡೆಸುವುದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ತುಂಬಾ ದೂರದಲ್ಲಿ ಜಮೀನುಗಳಲ್ಲಿ ಡೇರೆ ಕಟ್ಟಿಕೊಂಡು ಪ್ರಾಣಿ ಕೊಯ್ದು ಮಾಂಸಾಹಾರ ಸಿದ್ಧಪಡಿಸಿ, ಭೋಜನ ಮಾಡಿದವರಿಗೆ ತೊಂದರೆಯನ್ನೂ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.